alex Certify
ಕನ್ನಡ ದುನಿಯಾ       Mobile App
       

Kannada Duniya

ವಿರುಷ್ಕಾಗೆ ರಣವೀರ್-ದೀಪಿಕಾ ಕೊಟ್ಟಿದ್ದಾರೆ ಸ್ಪೆಷಲ್ ಗಿಫ್ಟ್

ವಿರಾಟ್ ಕೊಹ್ಲಿಯನ್ನು ಪ್ರೀತಿಸುವ ಮುನ್ನ ಅನುಷ್ಕಾ ಶರ್ಮಾ, ರಣವೀರ್ ಸಿಂಗ್ ಜೊತೆಗೆ ಡೇಟಿಂಗ್ ನಡೆಸಿದ್ಲು ಅನ್ನೊ ವಿಚಾರ ರಹಸ್ಯವಾಗೇನೂ ಉಳಿದಿಲ್ಲ. ಆದ್ರೆ ಮಾಜಿಗಳು ಅನ್ನೋ ಮುಜುಗರ ಅವರಿಬ್ಬರ ಮಧ್ಯೆ ಇಲ್ಲ. ರಣವೀರ್ ಹಾಗೂ ದೀಪಿಕಾ ಇಬ್ಬರೂ ಅನುಷ್ಕಾಗೆ ಆತ್ಮೀಯ ಸ್ನೇಹಿತರು.

ರಣವೀರ್ ಹಾಗೂ ದೀಪಿಕಾ ಸುಂದರವಾದ ಹೂವಿನ ಬೊಕೆ ಜೊತೆಗೆ ಶುಭಾಶಯವನ್ನು ಬರೆದು ಮದುವೆ ಉಡುಗೊರೆಯಾಗಿ ಅನುಷ್ಕಾ-ವಿರಾಟ್ ದಂಪತಿಗೆ ಕಳಿಸಿಕೊಟ್ಟಿದ್ದಾರೆ. ಸಾಮಾಜಿಕ ತಾಣಗಳಲ್ಲಿ ದೀಪಿಕಾ, ಅನುಷ್ಕಾಗೆ ಶುಭ ಹಾರೈಸಿರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಮುನಿಸು ಉಂಟಾಗಿರಬಹುದು ಅನ್ನೋ ಗಾಸಿಪ್ ಶುರುವಾಗಿತ್ತು.

ಆದ್ರೆ ದೀಪಿಕಾ ಟ್ವಿಟ್ಟರ್ ಅಥವಾ ಇನ್ ಸ್ಟಾಗ್ರಾಮ್ನಲ್ಲಿ ವಿಶ್ ಮಾಡೋದಕ್ಕಿಂದ ವೈಯಕ್ತಿಕವಾಗಿ ಶುಭ ಸಂದೇಶ ಕಳಿಸುವುದೇ ಸೂಕ್ತ ಎಂದುಕೊಂಡಿದ್ದಾರೆ. ಹಾಗಾಗಿ ರಣವೀರ್ ಮತ್ತು ದೀಪಿಕಾ ನವದಂಪತಿಗೆ ಉಡುಗೊರೆಯನ್ನು ಕಳಿಸಿಕೊಟ್ಟಿದ್ದಾರೆ. ಇಟಲಿಯಲ್ಲಿ ಅದ್ಧೂರಿ ವಿವಾಹದ ಬಳಿಕ ವಿರಾಟ್ ಹಾಗೂ ಅನುಷ್ಕಾ ಹನಿಮೂನ್ ಗೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...