alex Certify
ಕನ್ನಡ ದುನಿಯಾ       Mobile App
       

Kannada Duniya

ವಿರುಷ್ಕಾಗೆ ಇಟಲಿಯಲ್ಲಿ ಮದುವೆಯಾಗಲು ಐಡಿಯಾ ಕೊಟ್ಟಿದ್ಯಾರು ಗೊತ್ತಾ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮದುವೆ ಸುದ್ದಿಯನ್ನು ಸೀಕ್ರೆಟ್ ಆಗಿರಲು ಸಾಕಷ್ಟು ಕಸರತ್ತು ಮಾಡಿದ್ದಾರೆ. ಆದ್ರೆ ಕೆಲ ತಿಂಗಳುಗಳ ಮೊದಲೇ ಇಬ್ಬರೂ ಡೆಸ್ಟಿನೇಶನ್ ವೆಡ್ಡಿಂಗ್ ಗೆ ಪ್ಲಾನ್ ಮಾಡ್ತಿದ್ದಾರೆ ಅನ್ನೋದು ಮಾಧ್ಯಮಗಳಿಗೆ ಗೊತ್ತಾಗಿಬಿಟ್ಟಿತ್ತು.

ಮದುವೆ ಇಟಲಿಯಲ್ಲೇ ನಡೆಯಲಿದೆ ಅನ್ನೋದು ಕೂಡ ಕನ್ಫರ್ಮ್ ಆಗಿತ್ತು. ಆದ್ರೆ ಖಚಿತ ದಿನಾಂಕ ಮಾತ್ರ ಗೊತ್ತಿರಲಿಲ್ಲ. ಮದುವೆ ಬಳಿಕ ಖುದ್ದು ವಿರಾಟ್ ಹಾಗೂ ಅನುಷ್ಕಾ ಸಾಮಾಜಿಕ ತಾಣಗಳ ಮೂಲಕ ತಮ್ಮ ವಿವಾಹದ ಸುದ್ದಿಯನ್ನು ಬಹಿರಂಗಪಡಿಸಿದ್ರು.

ಮದುವೆ ಗಡಿಬಿಡಿಯಲ್ಲಿ ಮಾಧ್ಯಮಗಳ ಕಣ್ಣಿಗೆ ಬೀಳಬಾರದು ಅನ್ನೋದು ವಿರಾಟ್ ಮತ್ತು ಅನುಷ್ಕಾರ ಪ್ಲಾನ್. ಹಾಗಾಗಿ ಇಟಲಿಯಲ್ಲಿ ಮದುವೆಯಾಗಿ ಅಂತಾ ಐಡಿಯಾ ಕೊಟ್ಟವರು ಯಾರು ಗೊತ್ತಾ? ಬಾಲಿವುಡ್ ನಿರ್ಮಾಪಕ ಆದಿತ್ಯ ಚೋಪ್ರಾ. ಅಷ್ಟು ದೂರ ಮಾಧ್ಯಮದವರು, ಪಾಪರಾಜಿಗಳು ಬರೋದಿಲ್ಲ ಅನ್ನೋದು ಅವರ ಅಭಿಪ್ರಾಯವಾಗಿತ್ತು.

ಆದಿತ್ಯ ಚೋಪ್ರಾ ಕೂಡ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ನಟಿ ರಾಣಿ ಮುಖರ್ಜಿ ಜೊತೆ ಇಟಲಿಯಲ್ಲಿ ಗಪ್ ಚುಪ್ ಆಗಿ ಮದುವೆ ಆಗಿದ್ರು. ಭಾರತದಲ್ಲಿ ಮದುವೆಯಾದ್ರೆ ಪಾಪರಾಜಿಗಳ ಹಾವಳಿಯಿಂದ ಬಹಳ ಕಷ್ಟವಾಗಬಹುದು ಅಂತಾ ಅನುಷ್ಕಾಗೆ ಆದಿತ್ಯ ಚೋಪ್ರಾ ಹೇಳಿದ್ದರಂತೆ.

ಆದಿತ್ಯ ಚೋಪ್ರಾ ಸಲಹೆಯಂತೆ ಕೊಹ್ಲಿ-ಅನುಷ್ಕಾ ಇಟಲಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಮನೆಯ ಸದಸ್ಯರು, ಕೆಲವೇ ಕೆಲವು ಆಪ್ತರನ್ನು ಬಿಟ್ರೆ ಇನ್ಯಾರೂ ಇರಲಿಲ್ಲ. ಹಾಗಾಗಿ ಡಿಸೆಂಬರ್ 21 ಮತ್ತು 26ರಂದು ದೆಹಲಿ ಹಾಗೂ ಮುಂಬೈನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...