alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಗರ ಸ್ವರ್ಗ ಫಿನ್ ಲ್ಯಾಂಡ್ ನಲ್ಲಿದ್ದಾರೆ ವಿರುಷ್ಕಾ….

ಕಳೆದ ವಾರ ಸಾಮಾಜಿಕ ತಾಣಗಳಲ್ಲಿ ಸಂಚಲನ ಮೂಡಿಸಿದ್ದು ವಿರಾಟ್-ಅನುಷ್ಕಾ ಮದುವೆಯ ಫೋಟೋ ಮತ್ತು ವಿಡಿಯೋಗಳು. ಇಟಲಿಯಲ್ಲಿ ಸಪ್ತಪದಿ ತುಳಿದ ಈ ಜೋಡಿ ಅಲ್ಲಿಂದ ರೋಮ್ ಗೆ ಹಾರಿತ್ತು. ಈಗ ವಿರುಷ್ಕಾ ಫಿನ್ ಲ್ಯಾಂಡ್ ಗೆ ತೆರಳಿದ್ದಾರೆ.

ಅಲ್ಲಿ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಹನಿಮೂನ್ ಫೋಟೋಗಳನ್ನು ಕೂಡ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಮುಂಬೈನ ಟ್ರಾಫಿಕ್ ಕಿರಿಕಿರಿಯಿಂದ ದೂರ ಹೋಗಿ, ಫಿನ್ ಲ್ಯಾಂಡ್ ನ ಸುಂದರ ಪರಿಸರದಲ್ಲಿ ಇಬ್ಬರೂ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ.

 

ಸಾಂತಾ ಕ್ಲಾಸ್ ನ ತವರು ರೊವಾನಿಮಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. 2ನೇ ವಿಶ್ವಯುದ್ಧದ ಸಮಯದಲ್ಲಿ ಈ ಗ್ರಾಮ ಸಂಪೂರ್ಣ ನಾಶವಾಗಿತ್ತು. ಆದ್ರೀಗ ಕ್ರಿಸ್ಮಸ್ ದ್ಯೋತಕವಾಗಿ ಕಂಗೊಳಿಸುತ್ತಿದೆ. ನಾರ್ತನ್ ಲೈಟ್ಸ್ ಗೆ ಈ ಗ್ರಾಮ ಹೆಸರುವಾಸಿ.

ರೊವಾನಿಮಿಯಿಂದ ರಾತ್ರಿ ಈ ಲೈಟಿಂಗ್ಸ್ ವೀಕ್ಷಿಸಬಹುದು. ಲಕ್ಷುರಿ ಆ್ಯಕ್ಷನ್ ಕಂಪನಿ ವಿರಾಟ್-ಅನುಷ್ಕಾರ ರೊವಾನಿಮಿ ಹನಿಮೂನ್ ಗೆ ವ್ಯವಸ್ಥೆ ಮಾಡಿದೆ. ಆರ್ಕ್ಟಿಕ್, ಲ್ಯಾಪ್ಲ್ಯಾಂಡ್, ಫಿನ್ಲ್ಯಾಂಡ್, ಗ್ರೀನ್ ಲ್ಯಾಂಡ್ ಮತ್ತು ನಾರ್ತ್ ಪೋಲ್ ಗೆ ತೆರಳಲು ಇಚ್ಛಿಸುವ ಯುವ ಜೋಡಿಗೆ ಈ ಕಂಪನಿ ನೆರವಾಗ್ತಿದೆ. ರೋಮ್ ನಿಂದ ಹೊರಟ ವಿರುಷ್ಕಾಗೆ ರೊವಾನಿಮಿಗಿಂತ ಬೆಸ್ಟ್ ಪ್ಲೇಸ್ ಇನ್ಯಾವುದೂ ಸಿಗಲಿಕ್ಕಿಲ್ಲ ಅನ್ನೋದನ್ನು ಈ ಫೋಟೋಗಳೇ ಹೇಳ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...