alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಡಿಫ್ ಬೀದಿಯಲ್ಲಿ ಕೊಹ್ಲಿ ಜೊತೆ ಕಾಣಿಸಿಕೊಂಡ ಅನುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿರಲಿ ಇಲ್ಲ ಮನೆಯಲ್ಲಿರಲಿ ಈ ಒಬ್ಬ ವ್ಯಕ್ತಿ ಅವ್ರನ್ನು ಸದಾ ಪ್ರೋತ್ಸಾಹಿಸುತ್ತಿರುತ್ತಾರೆ. ಅವ್ರು ಬೇರೆ ಯಾರೂ ಅಲ್ಲ ಟೀಂ ಇಂಡಿಯಾ ನಾಯಕನ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ. ಕೊಹ್ಲಿ ಕಾರ್ಯಕ್ಕೆ ಸದಾ ಬೆಂಬಲ ನೀಡುವ ಅನುಷ್ಕಾ ಸದ್ಯ ಇಂಗ್ಲೆಂಡ್ ನಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ-20 ಪಂದ್ಯ ವೀಕ್ಷಣೆಗೆ ಬಂದಿರುವ ಅನುಷ್ಕಾ, ಕಾರ್ಡಿಫ್ ಬೀದಿಯಲ್ಲಿ ಪತಿ ಜೊತೆ ಸುತ್ತಾಡಿದ್ದಾಳೆ. ಇದ್ರ ಫೋಟೋ ವೈರಲ್ ಆಗಿದೆ. ಇಬ್ಬರೂ ಅಲ್ಲಿರುವ ಭಾರತೀಯ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಕೊಹ್ಲಿ, ಟೀಂ ಇಂಡಿಯಾದ ಇತರ ಸದಸ್ಯರ ಜೊತೆಗೂ ಅನುಷ್ಕಾ ಫ್ರೆಂಡ್ಲಿಯಾಗಿದ್ದಾರೆ. ನನಗೆ ಎಷ್ಟು ಬೆಂಬಲ ನೀಡ್ತಾರೋ ಅಷ್ಟೇ ಬೆಂಬಲವನ್ನು ಉಳಿದ ಆಟಗಾರರಿಗೂ ನೀಡ್ತಾರೆಂದು ಕೊಹ್ಲಿ ಹೇಳಿದ್ದರು.

ಅನುಷ್ಕಾ ಅಭಿನಯದ ಎರಡು ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ. ಸೂಯಿದಾಗ್ ಹಾಗೂ ಝಿರೋ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...