alex Certify
ಕನ್ನಡ ದುನಿಯಾ       Mobile App
       

Kannada Duniya

ಆಹ್ವಾನದ ನಿರೀಕ್ಷೆಯಲ್ಲಿದ್ದ ಅಜ್ಜಿ – ಹಿರಿಯರ ಆಶೀರ್ವಾದವಿಲ್ಲದೆ ನಡೀತು ವಿರುಷ್ಕಾ ಮದುವೆ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಡಿಸೆಂಬರ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಗ್ರ್ಯಾಂಡ್ ಹೊಟೇಲ್ ನಲ್ಲಿ ಮದುವೆ ಸಮಾರಂಭ ನಡೆದಿದೆ. ಮದುವೆ ವಿಷ್ಯವನ್ನು ಸಂಬಂಧಿಕರಿಂದ ಹಿಡಿದು ಮಾಧ್ಯಮದವರೆಗೆ ಗುಪ್ತವಾಗಿಟ್ಟಿದ್ದರು ವಿರಾಟ್-ಅನುಷ್ಕಾ. ಮದುವೆಯಾದ ನಂತ್ರವೇ ಎಲ್ಲರಿಗೂ ಸುದ್ದಿ ಗೊತ್ತಾಗಿದ್ದು.

ವಿರಾಟ್-ಅನುಷ್ಕಾ ಮದುವೆಯಲ್ಲಿ ಕೆಲವೇ ಕೆಲವು ಮಂದಿಗೆ ಆಹ್ವಾನ ನೀಡಲಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದ್ರೆ ವಿರಾಟ್-ಅನುಷ್ಕಾ ಮದುವೆ ಕಣ್ತುಂಬಿಕೊಳ್ಳಲು ಕಾಯ್ತಿದ್ದ ಅನೇಕರಲ್ಲಿ ಅನುಷ್ಕಾ ಅಜ್ಜಿ ಕೂಡ ಒಬ್ಬರು.

ಮದುವೆಗೂ ಮುನ್ನ ಅನುಷ್ಕಾ ಅಜ್ಜಿಗೆ ಯಾವುದೇ ಸುದ್ದಿ, ಕರೆಯೋಲೆ ಹೋಗಿಲ್ಲವಂತೆ. ಪ್ರತಿದಿನ ಫೋನ್ ನಲ್ಲಿ ಮಾತನಾಡುತ್ತಿದ್ದರೂ ಮದುವೆ ವಿಷ್ಯವನ್ನು ಯಾರೂ ಹೇಳಿಲ್ಲವಂತೆ. ಡೆಹ್ರಾಡೂನ್ ನಲ್ಲಿ ಅನುಷ್ಕಾ ಚಿಕ್ಕಪ್ಪ-ಚಿಕ್ಕಮ್ಮನ ಜೊತೆ ವಾಸವಾಗಿರುವ ಅಜ್ಜಿ ಮೊಮ್ಮಗಳ ಮದುವೆಗೆ ಆಹ್ವಾನ ಬರುತ್ತೆ ಎಂದು ಕಾದಿದ್ದರಂತೆ. ಆದ್ರೆ ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿಯೇ ಮದುವೆ ನಡೆದಿದೆ ಎಂಬ ಸಂಗತಿ ಅವರಿಗೆ ಗೊತ್ತಾಯ್ತಂತೆ.

ಈ ಬಗ್ಗೆ ಅಜ್ಜಿ ಅಧಿಕೃತವಾಗಿ ತನ್ನ ನೋವನ್ನು ತೋಡಿಕೊಂಡಿಲ್ಲ. ಆದ್ರೆ ನೋವಿನಲ್ಲಿಯೇ ಮೊಮ್ಮಗಳಿಗೆ ಆಶೀರ್ವಾದ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...