alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಜೊತೆ ತೆಹ್ರಿಯಲ್ಲಿ ಕೊಹ್ಲಿ ಕ್ರಿಸ್ಮಸ್

virat-kohli-and-anushka-sharma_1482590738

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಸ್ಮಸ್ ಖುಷಿಯಲ್ಲಿದ್ದಾರೆ. ಗೆಳತಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ಉತ್ತರಾಖಂಡ ನಲ್ಲಿ ಕ್ರಿಸ್ಮಸ್ ಆಚರಿಸ್ತಿದ್ದಾರೆ.

ಶನಿವಾರ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತೆಹ್ರಿಗೆ ಪ್ರಯಾಣ ಬೆಳೆಸಿದ್ರು. ಸದ್ಯ ಇಬ್ಬರೂ ತೆಹ್ರಿಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಡೆಹ್ರಾಡೂನ್ ನಿವಾಸಿಯಾಗಿದ್ದಾರೆ. ಅವ್ರ ತಂದೆ-ತಾಯಿ ಋಷಿಕೇಶದಲ್ಲಿ ನೆಲೆಸಿದ್ದಾರೆ. ಕೊಹ್ಲಿ, ಅನುಷ್ಕಾ ಜೊತೆ ಋಷಿಕೇಶಕ್ಕೆ ತೆರಳಿ ಅನುಷ್ಕಾ ತಂದೆ-ತಾಯಿಯನ್ನು ಭೇಟಿ ಮಾಡಲಿದ್ದಾರೆನ್ನಲಾಗಿದೆ.

ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಕೊಹ್ಲಿ, ಅನುಷ್ಕಾರನ್ನು ನೋಡ್ತಾ ಇದ್ದಂತೆ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿ ಬಿದ್ದಿದ್ದರು. ಅಭಿಮಾನಿಗಳಿಂದ ತಪ್ಪಿಸಿಕೊಂಡು ತೆಹ್ರಿಗೆ ಪ್ರಯಾಣ ಬೆಳೆಸಿದೆ ಈ ಜೋಡಿ. ವಾಸ್ತವವಾಗಿ ಉತ್ತರಾಖಂಡ್ ಸರ್ಕಾರ ಪ್ರವಾಸೋದ್ಯಮದ ರಾಯಭಾರಿಯಾಗಿ ಕೊಹ್ಲಿಯವರನ್ನು ನೇಮಿಸಿದೆ. ಆದ್ರೆ ರಜೆ ಅಭಾವದಿಂದಾಗಿ ಕೊಹ್ಲಿಗೆ ಉತ್ತರಾಖಂಡಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಸ್ವಲ್ಪ ಫ್ರೀಯಾಗಿರುವ ಕೊಹ್ಲಿ ಗರ್ಲ್ ಫ್ರೆಂಡ್ ಜೊತೆ ಕ್ರಿಸ್ಮಸ್ ಆಚರಿಸ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...