alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಲಿವುಡ್ ನಟನ ಕಟ್ಟುಮಸ್ತಾದ ದೇಹ

kunal_640x480_41489734794

ನಟ ಕುಣಾಲ್ ಕಪೂರ್ ‘ವೀರಂ’ ಚಿತ್ರದಲ್ಲಿ ಕಳರಿಪಟ್ಟು ಯೋಧನ ಅವತಾರದಲ್ಲಿ ಮಿಂಚಿದ್ದರು. ಇದೀಗ ಕುಣಾಲ್ ಕಪೂರ್ ಪೋಸ್ಟ್ ಮಾಡಿರುವ ಫೋಟೋ ಒಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೇವಲ 6 ತಿಂಗಳುಗಳಲ್ಲಿ ಕುಣಾಲ್ ಅವರಲ್ಲಾದ ವಿಶಿಷ್ಟ ಬದಲಾವಣೆಯ ಫೋಟೋ ಇದು.

‘ವೀರಂ’ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ಕುಣಾಲ್ ತೆಳ್ಳಗೆ ಬೆಳ್ಳಗಿದ್ದು. ಆದ್ರೀಗ ಅವರ ಲುಕ್ಕೇ ಬದಲಾಗಿದೆ. ಕಟ್ಟುಮಸ್ತಾದ ದೇಹ ಎಂಥವರನ್ನೂ ಮೋಡಿ ಮಾಡುವಂತಿದೆ. ಹೀಗೆ ಬಾಡಿ ಬಿಲ್ಡ್ ಮಾಡಲು ಅವರು ತೆಗೆದುಕೊಂಡ ಸಮಯ 6 ತಿಂಗಳು 23 ದಿನ 12 ಗಂಟೆಗಳಂತೆ.

ಇಷ್ಟು ದಿನದಲ್ಲಿ ಒಟ್ಟು 232 ಶೇಕ್ಸ್ ಕುಡಿದಿದ್ದೇನೆ ಅಂತಾನೂ ಕುಣಾಲ್ ಬಹಿರಂಗಪಡಿಸಿದ್ದಾರೆ. ವೀರಂ ನಿಜಕ್ಕೂ ತಮ್ಮ ಪಾಲಿಗೆ ಸವಾಲಿನ ಸಿನೆಮಾ ಎಂದಿರೋ ಕುಣಾಲ್, ವರ್ಕೌಟ್ ಜೊತೆಗೆ ಶೂಟಿಂಗ್ ಸಹ ಮೆಂಟೇನ್ ಮಾಡುವುದು ಕಷ್ಟವಾಗಿತ್ತು ಅಂತಾ ಹೇಳಿದ್ದಾರೆ. ವೀರಂ ಚಿತ್ರಕ್ಕಾಗಿ ಚೆನ್ನಾಗಿ ಮಸಲ್ಸ್ ಬೆಳೆಸಿಕೊಳ್ಳುವಂತೆ ನಿರ್ದೇಶಕ ಜಯರಾಜ್ ಸೂಚಿಸಿದ್ದರಂತೆ. ಹಾಗಾಗಿ ಕಠಿಣ ಕಸರತ್ತು ಶುರು ಮಾಡಿದ ಕುಣಾಲ್ ಕಪೂರ್, ಈಗ ಅದ್ಭುತವಾದ ಫಿಟ್ & ಫೈನ್ ದೇಹ ಬೆಳೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...