alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಡಿಂಪಲ್ ಕಪಾಡಿಯಾ, ಸನ್ನಿ ಡಿಯೋಲ್ ರೊಮ್ಯಾನ್ಸ್

ಸೆಲೆಬ್ರಿಟಿಗಳು ಕದ್ದು ಮುಚ್ಚಿ ಏನೇ ಮಾಡಿದ್ರೂ ಸಾಮಾಜಿಕ ತಾಣಗಳಲ್ಲಿ ಅದು ವೈರಲ್ ಆಗಿಬಿಡುತ್ತದೆ. ಇತ್ತೀಚೆಗಷ್ಟೆ ರಣಬೀರ್ ಕಪೂರ್ ಹಾಗೂ ಪಾಕ್ ನಟಿ ಮಾಹಿರಾ ಖಾನ್ ಸಿಗರೇಟ್ ಸೇದ್ತಾ ಇರೋ ಫೋಟೋಗಳು ಹರಿದಾಡಿದ್ವು. ಈಗ ಲಂಡನ್ ನಲ್ಲಿ ರೊಮ್ಯಾನ್ಸ್ ಮಾಡ್ತಾ ಇದ್ದ ಮಾಜಿ ಪ್ರೇಮಿಗಳು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಅವರು ಯಾರ್ ಗೊತ್ತಾ? ಡಿಂಪಲ್ ಕಪಾಡಿಯಾ ಹಾಗೂ ಸನ್ನಿ ಡಿಯೋಲ್. ಇಬ್ಬರೂ ಕೈಕೈ ಹಿಡಿದುಕೊಂಡು ಒಟ್ಟಿಗೆ ಕುಳಿತಿರೋ ವಿಡಿಯೋವನ್ನು ಕಮಾಲಾ ಆರ್ ಖಾನ್ ಬಹಿರಂಗಪಡಿಸಿದ್ದಾರೆ. ಡಿಂಪಲ್ ಹಾಗೂ ಸನ್ನಿ ಡಿಯೋಲ್ ಕಳೆದ ತಿಂಗಳು ಹಾಲಿಡೇ ಕಳೆಯಲು ಲಂಡನ್ ಗೆ ತೆರಳಿದ್ದರಂತೆ.

ಇವರಿಬ್ಬರೂ ಮಂಜಿಲ್ ಮಂಜಿಲ್, ನರಸಿಂಹ, ಅರ್ಜುನ್ ಹಾಗೂ ಆಗ್ ಕಾ ಗೋಲಾ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬೇರೊಬ್ಬಳನ್ನು ಮದುವೆಯಾಗಿದ್ರೂ ಸನ್ನಿ ಡಿಯೋಲ್, ಡಿಂಪಲ್ ಕಪಾಡಿಯಾಗೆ ಪತ್ನಿ ಸ್ಥಾನ ನೀಡಿದ್ದರಂತೆ. ರಾಜೇಶ್ ಖನ್ನಾ ಹಾಗೂ ಡಿಂಪಲ್ ಕಪಾಡಿಯಾ ದೂರವಾಗಲು ಕೂಡ ಸನ್ನಿ ಡಿಯೋಲ್ ಕಾರಣ ಎನ್ನಲಾಗ್ತಿತ್ತು.

ಆದ್ರೆ ಡಿಂಪಲ್, ರಾಜೇಶ್ ಖನ್ನಾಗೆ ವಿಚ್ಛೇದನ ನೀಡಿರಲಿಲ್ಲ. ಸನ್ನಿ ಡಿಯೋಲ್, ಪೂಜಾಳನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಮಗ ಕರಣ್ ಬಾಲಿವುಡ್ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾನೆ. ಪತ್ನಿ ಇದ್ರೂ ಪ್ರಿಯತಮೆಯ ಜೊತೆ ಸುತ್ತಾಡ್ತಿರೋ ಸನ್ನಿ ಡಿಯೋಲ್ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...