alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾರೆ ಈ ನಟ

ನಾನು ಮದುವೆಯಾಗಲು ಹುಡುಗಿ ಹುಡುಕುತ್ತಿದ್ದೇನೆ. ಯಾವುದೇ ಡಿಮ್ಯಾಂಡ್, ಕಂಡೀಷನ್ ಇಲ್ಲ. ನಾನು ಇಷ್ಟವಾದವರು ಕರೆ ಮಾಡಿ. ಹೀಗೆಂದು ಹೇಳಿದ್ದು ಬೇರಾರು ಅಲ್ಲ. ತಮಿಳು ನಟ ಆರ್ಯ.

ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಆರ್ಯ, ಕನ್ನಡದ ‘ರಾಜರಥ’ ಚಿತ್ರದಲ್ಲಿಯೂ ನಟಿಸಿದ್ದಾರೆ. ‘ರಂಗಿತರಂಗ’ ನಿರ್ದೇಶಕ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಸಹೋದರರ ‘ರಾಜರಥ’ ಚಿತ್ರ ಆರಂಭದಿಂದಲೂ ಗಮನ ಸೆಳೆದಿದ್ದು, ಈ ಚಿತ್ರದಲ್ಲಿ ಆರ್ಯ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಆರ್ಯ ಜಿಮ್ ನಲ್ಲಿ ಸ್ನೇಹಿತರೊಂದಿಗೆ ತಮ್ಮ ಮದುವೆಯ ಕುರಿತಾಗಿ ಮಾತನಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಮತ್ತೆ ಮಾತನಾಡಿರುವ ಆರ್ಯ, ನಾನು ಮದುವೆ ಬಗ್ಗೆ ಹೇಳಿದ್ದ ವಿಡಿಯೋ ಸ್ನೇಹಿತರಿಂದ ಅಪ್ ಲೋಡ್ ಆಗಿದೆ. ಅದರಲ್ಲಿರುವುದೆಲ್ಲಾ ನಿಜ. ನಾನು ಮದುವೆಯಾಗಲು ಹುಡುಗಿ ಹುಡುಕುತ್ತಿದ್ದೇನೆ. ಯಾವುದೇ ಷರತ್ತು ಇಲ್ಲ. ಇಷ್ಟವಾದವರು ತಿಳಿಸಿ ಎಂದು ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...