alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿಗಿಂತ ಮುಂದಿರುವ ಪ್ರಿಯಾಗೆ ಬಾಲಿವುಡ್ ನಿಂದ ಬಂತು ಆಫರ್

28 ಸೆಕೆಂಡಿನ ವಿಡಿಯೋ ಮೂಲಕ ದಾಖಲೆ ಮೇಲೆ ದಾಖಲೆ ಬರೆದಿದ್ದಾಳೆ ಮಲಯಾಳಂ ನಟಿ ಪ್ರಿಯಾ ಪ್ರಕಾಶ್. ಗೂಗಲ್ ಸರ್ಚ್ ನಲ್ಲಿ ಪ್ರಿಯಾ ಸನ್ನಿ ಲಿಯೋನ್ ಹಿಂದಿಕ್ಕಿದ್ದಾಳೆ. ಅತಿ ಹೆಚ್ಚು ಸರ್ಚ್ ಆದ ನಟಿಯರ ಪಟ್ಟಿಯಲ್ಲಿ ಪ್ರಿಯಾ ಮೊದಲ ಸ್ಥಾನದಲ್ಲಿದ್ದಾಳೆ.

24 ಗಂಟೆಯಲ್ಲಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸನ್ನಿ ಲಿಯೋನ್ ಮತ್ತು ಆಲಿಯಾ ಭಟ್ ಗಿಂತ ಹೆಚ್ಚು ಪ್ರಿಯಾಳ ಹುಡುಕಾಟ ನಡೆಸಲಾಗಿದೆ.  ಪ್ರಿಯಾ ಜೊತೆ ಕೆಲಸ ಮಾಡಲು ಅನೇಕರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಿಂದ ಹಿಡಿದು ಎಲ್ಲ ಸಿನಿಮಾ ಕ್ಷೇತ್ರದಿಂದ ಪ್ರಿಯಾಗೆ ಆಫರ್ ಬರ್ತಿದೆ.

ಬಾಲಿವುಡ್ ಲೈಫ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಪಿಂಕ್ ಚಿತ್ರದ ನಿರ್ದೇಶಕ ಅನಿರುದ್ಧ್ ರಾಯ್ ಚೌಧರಿ ಪ್ರಿಯಾ ಜೊತೆ ಕೆಲಸ ಮಾಡಲು ಮುಂದಾಗಿದ್ದಾರಂತೆ. ಈ ಬಗ್ಗೆ ಪ್ರಿಯಾ ಜೊತೆ ಮಾತುಕತೆ ನಡೆಸಿದ್ದಾರಂತೆ. ಆದ್ರೆ ಪ್ರಿಯಾ ಬಳಿ ಜೂನ್ ವರೆಗೆ ಸಮಯವಿಲ್ಲವಂತೆ. ಆಕೆ ಮೊದಲ ಚಿತ್ರ ಜೂನ್ ನಲ್ಲಿ ತೆರೆಗೆ ಬರಲಿದೆ. ಹಾಗಾಗಿ ಅಲ್ಲಿಯವರೆಗೆ ಬ್ಯುಸಿ ಎಂದಿದ್ದಾಳಂತೆ ಪ್ರಿಯಾ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...