alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪ ಎದುರಿಸುತ್ತಿರುವ ನಟನಿಗೆ ಬೆಂಬಲ ನೀಡಿದ ರೀಲ್ ಲೈಫ್ ಸೊಸೆ

ಬಾಲಿವುಡ್ ನಲ್ಲಿ ಮೀಟೂ ಅಭಿಯಾನ ಚುರುಕು ಪಡೆದಿದೆ. ಒಬ್ಬರಾದ್ಮೇಲೆ ಒಬ್ಬರಂತೆ ಲೈಂಗಿಕ ಶೋಷಣೆ ಬಗ್ಗೆ ಮಾತನಾಡ್ತಿದ್ದಾರೆ. ಈ ಮಧ್ಯೆ ಆರೋಪ ಎದುರಿಸುತ್ತಿರುವ ಕಲಾವಿದರ ಬೆಂಬಲಕ್ಕೆ ಅವ್ರ ಕುಟುಂಬದ ಜೊತೆ ಕೆಲ ಕಲಾವಿದರು ನಿಂತಿದ್ದಾರೆ.

ಚಿತ್ರ ನಿರ್ಮಾಪಕಿ ವಿಂಟಾ ನಂದಾ, ನಟ ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಸಿಂಟಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ನಾಥ್ ಗೆ ನೊಟೀಸ್ ಜಾರಿ ಮಾಡಿದೆ. ಈ ಮಧ್ಯೆ ಅಲೋಕ್ ನಾಥ್ ಗೆ ರೀಲ್ ಲೈಫ್ ಸೊಸೆ ಅಶಿತಾ ಧವನ್ ಬೆಂಬಲ ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅಶಿತಾ, ವಿಂಟಾಗೆ ಬೆಂಬಲ ನೀಡುವುದಿಲ್ಲ. ಆಗ್ಲೇ ಈ ಬಗ್ಗೆ ವಿಂಟಾ ಮಾತನಾಡಬೇಕಿತ್ತು. 20 ವರ್ಷಗಳ ಹಿಂದಿನ ವಿಷ್ಯವನ್ನು ಈಗ ಹೇಳ್ತಿದ್ದಾರೆ. 20 ವರ್ಷ ಹಿಂದಿನ ಸಂಗತಿಯನ್ನು ಗೂಗಲ್ ಕೂಡ ಮರೆತಿರುತ್ತದೆ ಎಂದು ಅಶಿತಾ ಹೇಳಿದ್ದಾರೆ.

ಪ್ರಚಾರಕ್ಕೆ ವಿಂಟಾ ಹೀಗೆ ಮಾಡ್ತಿದ್ದಾರೆ ಅಂತಾ ನಾನು ಹೇಳೋದಿಲ್ಲ. ಆದ್ರೆ ಹಳೆ ವಿಚಾರವನ್ನು ಕೆದಕುವುದು ಮೂರ್ಖತನ. ಅಲೋಕ್ ನಾಥ್ ರನ್ನು ನಾನು ಅನೇಕ ವರ್ಷಗಳಿಂದ ನೋಡಿದ್ದೇನೆ. ಅವ್ರ ವರ್ತನೆ ನನಗೆ ಎಂದೂ ಕೆಟ್ಟದಾಗಿ ಕಾಣಲಿಲ್ಲ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ರಾಕ್ಷಸನಿರುತ್ತಾನೆ. ಪ್ರತಿಯೊಬ್ಬರೂ ತಪ್ಪು ಮಾಡ್ತಾರೆ. ಅಲೋಕ್ ನಾಥ್ ಕೂಡ ಮಾಡಿರಬಹುದು ಎಂದು ಅಶಿತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...