alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈಗೆ ಬಂದ ಹಾಲಿವುಡ್ ಹೀರೋಗೆ ಅದ್ಧೂರಿ ಸ್ವಾಗತ

vin8

ಹಾಲಿವುಡ್ ನ ಖ್ಯಾತ ನಟ ವಿನ್ ಡೀಸೆಲ್ ಭಾರತಕ್ಕೆ ಆಗಮಿಸಿದ್ದಾರೆ. ‘XXX-The Return Of Xander Cage’ ಚಿತ್ರದ ಪ್ರಮೋಷನ್ ಗಾಗಿ ಅವರು ಮುಂಬೈಗೆ ಬಂದಿಳಿದಿದ್ದಾರೆ. ಈ ಚಿತ್ರದಲ್ಲಿ ವಿನ್ ಡೀಸೆಲ್ ಜೊತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಅಭಿನಯಿಸಿದ್ದಾರೆ.

ಮುಂಬೈಗೆ ಬಂದಿಳಿದ ವಿನ್ ಡೀಸೆಲ್ ಹಾಗೂ ಚಿತ್ರದ ನಿರ್ದೇಶಕ ಡಿಜೆ ಕರುಸೋ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಮರಾಠಿ ಉಡುಗೆ ಉಟ್ಟ ಯುವತಿಯರು ಹಣೆಗೆ ತಿಲಕ ಇಟ್ಟು ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡ್ರು. ಈ ಸಮಯದಲ್ಲಿ ದೀಪಿಕಾ ಪಡುಕೋಣೆ ಕೂಡ ಸ್ಥಳದಲ್ಲಿದ್ದರು.

ಭಾರತದಲ್ಲಿ ಕೂಡ ವಿನ್ ಡೀಸೆಲ್ ಗೆ ಲಕ್ಷಾಂತರ ಅಭಿಮಾನಿಗಳಿದ್ದು, ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದಿದ್ದಾರೆ. ಇದೇ ತಿಂಗಳ 20 ರಂದು ‘XXX-The Return Of Xander Cage’ ಚಿತ್ರ ಬಿಡುಗಡೆಯಾಗಲಿದೆ. ದೀಪಿಕಾ ಅಭಿನಯದ ಹಾಲಿವುಡ್ ನ ಮೊದಲ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಕಾತರದಿಂದಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...