alex Certify
ಕನ್ನಡ ದುನಿಯಾ       Mobile App
       

Kannada Duniya

ವಿಕ್ರಂ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಟ್ರೇಲರ್

vikram-dd

ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ‘ಸಾಹೇಬ’ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಅವರ ಮತ್ತೊಬ್ಬ ಪುತ್ರ ವಿಕ್ರಂ ರವಿಚಂದ್ರನ್ ‘ನವೆಂಬರ್ ನಲ್ಲಿ ನಾನು ಮತ್ತು ಅವಳು’ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

ಇತ್ತೀಚೆಗೆ ಚಿತ್ರದ ಟ್ರೇಲರ್ ಮತ್ತು ಫೋಟೋ ಶೂಟ್ ಮಾಡಲಾಗಿದೆ. ಆಗಸ್ಟ್ 16 ರಂದು ವಿಕ್ರಂ ಬರ್ತಡೇ ಪ್ರಯುಕ್ತ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.

ಆರ್.ಎಸ್. ಪ್ರೊಡಕ್ಷನ್ಸ್ ಕನಕಪುರ ಶ್ರೀನಿವಾಸ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ, ಸತ್ಯ ಹೆಗ್ಡೆ ಕ್ಯಾಮೆರಾ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ, ರವಿವರ್ಮ ಸಾಹಸ, ಅರುಣ್ ಸಾಗರ್ ಕಲಾ ನಿರ್ದೇಶನ, ಕವಿರಾಜ್ ಸಾಹಿತ್ಯ ಚಿತ್ರಕ್ಕಿದೆ. 2018 ರ ಆಗಸ್ಟ್ 10 ಕ್ಕೆ ಈ ಸಿನಿಮಾ ತೆರೆ ಕಾಣಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...