alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿ ಬೆಲೆಗೆ ಮಲ್ಯ ಮನೆ ಖರೀದಿಸಿದ ಬಾಲಿವುಡ್ ನಟ

go-maly

ಮುಂಬೈ: ಉದ್ಯಮಿ ವಿಜಯ್ ಮಲ್ಯ ಅವರ ‘ಕಿಂಗ್ ಫಿಶರ್ ವಿಲ್ಲಾ’ ಕೊನೆಗೂ ಸೇಲ್ ಆಗಿದ್ದು, ಬಾಲಿವುಡ್ ನಟರೊಬ್ಬರು ಖರೀದಿಸಿದ್ದಾರೆ.

ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ಕೊಡಬೇಕಿರುವ ಮಲ್ಯ ವಿದೇಶದಲ್ಲಿದ್ದಾರೆ. ಅವರ ಆಸ್ತಿಗಳನ್ನು ಹರಾಜು ಹಾಕಲು ಬ್ಯಾಂಕ್ ಗಳು ಪ್ರಯತ್ನ ನಡೆಸಿದ್ದರೂ ಖರೀದಿದಾರರು ಮುಂದೆ ಬಂದಿರಲಿಲ್ಲ.

ಈಗ ಗೋವಾದ ಕಾಂಡೊಲಿಮ್ ಪ್ರದೇಶದಲ್ಲಿ ಸಮುದ್ರಕ್ಕೆ ಅಭಿಮುಖವಾಗಿರುವ ‘ಕಿಂಗ್ ಫಿಶರ್ ವಿಲ್ಲಾ’ವನ್ನು ನಟ, ಉದ್ಯಮಿ, ಜೆ.ಎಂ.ಜೆ. ಗ್ರೂಪ್ ಅಧ್ಯಕ್ಷ ಸಚಿನ್ ಜೋಶಿ 73 ಕೋಟಿ ರೂ.ಗೆ ಖರೀದಿಸಿದ್ದಾರೆ.

ಮೊದಲಿಗೆ ಈ ಮನೆಗೆ 83 ಕೋಟಿ ರೂ. ನಿಗದಿ ಮಾಡಿ, ಹರಾಜಿಗೆ ಮುಂದಾಗಿದ್ದರೂ, ಯಾರೂ ಖರೀದಿಗೆ ಆಸಕ್ತಿ ತೋರಿರಲಿಲ್ಲ. ಈಗ ಸಚಿನ್ ಜೋಶಿ ಅದನ್ನು ಖರೀದಿಸಿದ್ದಾರೆ.

ಸಚಿನ್ ಜೋಶಿ ‘ಮುಂಬೈ ಮಿರರ್’, ‘ಜಾಕ್ ಪಾಟ್’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮೀಡಿಯಾ ಮತ್ತು ಎಂಟರ್ ಟೈನ್ ಮೆಂಟ್ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...