alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾಬಾಲನ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್

ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ ಮುಂದಿನ ಚಿತ್ರ ತುಮ್ಹಾರಿ ಸುಲು ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ಈಗ ವಿದ್ಯಾಬಾಲನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ ನೀಡಿದೆ ಚಿತ್ರತಂಡ. ಚಿತ್ರ ನಿಗದಿಗೂ ಮೊದಲೇ ಬಿಡುಗಡೆಯಾಗಲಿದೆ.

ಈ ಹಿಂದೆ ಚಿತ್ರ ಡಿಸೆಂಬರ್ 1ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿತ್ತು. ಆದ್ರೆ ನವೆಂಬರ್ 24ರಂದೇ ಚಿತ್ರ ಬಿಡುಗಡೆಗೆ ತಂಡ ಮುಂದಾಗಿದೆ. ಹಾಗಾಗಿ ವಿದ್ಯಾ ಬಾಲನ್ ಅಭಿಮಾನಿಗಳ ಕಾಯುವಿಕೆ ಸ್ಪಲ್ಪ ಕಡಿಮೆಯಾಗಲಿದೆ. ಇತ್ತೀಚಿಗೆ ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಟೀಸರ್, ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚಿತ್ರದಲ್ಲಿ ವಿದ್ಯಾ ಆರ್ಜೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಈ ಹಿಂದೆ ಲಗೇ ರಹೋ ಮುನ್ನಾಭಾಯಿಯಲ್ಲಿ ವಿದ್ಯಾ ಆರ್ಜೆ ಪಾತ್ರ ಮಾಡಿದ್ದಳು. ಬೇಗಂ ಜಾನ್ ನಂತ್ರ ವಿದ್ಯಾ ಈ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಬಾರಿ ಸಾಂಪ್ರದಾಯಿಕ ಪಾತ್ರದಲ್ಲಿ ಮಿಂಚಲಿದ್ದಾಳೆ ವಿದ್ಯಾ. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...