alex Certify
ಕನ್ನಡ ದುನಿಯಾ       Mobile App
       

Kannada Duniya

ವರದಿಗಾರರ ಈ ಪ್ರಶ್ನೆಗೆ ಕೋಪಗೊಂಡ ನಟಿ

ಬಿ ಟೌನ್ ನಟಿ ವಿದ್ಯಾ ಬಾಲನ್ ವರದಿಗಾರರ ಪ್ರಶ್ನೆಗೆ ತಾಳ್ಮೆಯಿಂದ ಉತ್ತರ ನೀಡ್ತಾರೆ. ಆದ್ರೆ ಈ ಬಾರಿ ವರದಿಗಾರರೊಬ್ಬರ ಪ್ರಶ್ನೆಗೆ ವಿದ್ಯಾ ಸಿಟ್ಟಿಗೆದ್ದಿದ್ರು. ‘ತುಮಾರಿ ಸುಲ’ ಚಿತ್ರದ ಪ್ರಚಾರಕ್ಕೆ ಬಂದಿದ್ದ ವೇಳೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆ ವಿದ್ಯಾ ಕೋಪ ನೆತ್ತಿಗೇರುವಂತೆ ಮಾಡಿತ್ತು.

ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನೀವು ಇನ್ಮುಂದೆಯೂ ಇಂಥಹ ಚಿತ್ರಗಳಲ್ಲಿಯೇ ನಟಿಸ್ತೀರಾ ಇಲ್ಲ ತೂಕ ಇಳಿಸಿಕೊಳ್ತಿರಾ ಎಂದು ವರದಿಗಾರರೊಬ್ಬರು ಕೇಳಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ವಿದ್ಯಾ ತೂಕಕ್ಕೂ ಮಹಿಳಾ ಪ್ರಧಾನ ಚಿತ್ರಕ್ಕೂ ಯಾವ ಸಂಬಂಧ ಎಂದಿದ್ದಾರೆ. ನೀವು ಮುಂದೆ ಗ್ಲಾಮರ್ ಚಿತ್ರ ಮಾಡಲು ತೂಕ ಇಳಿಸಿಕೊಳ್ತೀರಾ ಎಂಬುದು ನನ್ನ ಪ್ರಶ್ನೆ ಎಂದಿದ್ದಾರೆ ವರದಿಗಾರ.

ನಾನು ಹೇಗಿದ್ದೇನೋ ಅದಕ್ಕೆ ಹೊಂದುವ ಚಿತ್ರಗಳನ್ನೇ ಮಾಡುತ್ತಿದ್ದೇನೆ. ನಾನು ಮಾಡುತ್ತಿರುವ ಪಾತ್ರ ನನಗೆ ಖುಷಿ ನೀಡಿದೆ. ನಿಮ್ಮಂತ ಜನರು ನಿಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ ವಿದ್ಯಾ. ಮಹಿಳೆಯರ ತೂಕ ಹಾಗೂ ಅವರ ಡ್ರೆಸ್ ಬಗ್ಗೆ ಪ್ರತಿಕ್ರಿಯೆ ನೀಡುವವರಿಗೆ ವಿದ್ಯಾ ನೇರವಾಗಿ ಉತ್ತರ ನೀಡಿದ್ದಾರೆ.

ತುಮಾರಿ ಸುಲ ಇದೇ ನವೆಂಬರ್ 17ರಂದು ತೆರೆಗೆ ಬರಲಿದೆ. ಮಧ್ಯಮ ವರ್ಗದ ಮಹಿಳೆಯಾಗಿರುವ ವಿದ್ಯಾ ಆರ್ ಜೆ ಯಾಗಿ ಏನೆಲ್ಲ ಮಾಡ್ತಾರೆ ಎಂಬುದು ತುಮಾರಿ ಸುಲ ಚಿತ್ರಕಥೆಯಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...