alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಯ ಬೆನ್ನು ಬಿಡ್ತಿಲ್ಲ ಬೆತ್ತಲೆ ಬೆಡಗಿ

quandee

ಖಾಂದೀಲ್ ಬಾಲೋಚ್ ಹೆಸರು ಹೇಳುತ್ತಲೇ ನೆನಪಾಗೋದು ಸಾಮಾಜಿಕ ಜಾಲತಾಣಗಳ ವಿಡಿಯೋ. ಪಾಕಿಸ್ತಾನಿ ಮಾಡೆಲ್ ಖಾಂದೀಲ್ ಬಾಲೋಚ್, ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿ ಸಂದರ್ಭದಲ್ಲಿ ಆಟಗಾರರಿಗಿಂತ ಹೆಚ್ಚು ಫೇಮಸ್ ಆಗಿದ್ದಾಳೆ.

ಪಾಕಿಸ್ತಾನ ಹಾಗೂ ಇಂಡಿಯಾ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ, ಈಕೆ ಪೋಸ್ಟ್ ಮಾಡಿದ್ದ ವಿಡಿಯೋ ಸಂಚಲನ ಸೃಷ್ಠಿಸಿತ್ತು. ಈ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಭಾರತ ಸೆಮಿಫೈನಲ್ ನಲ್ಲಿ ಸೋತರೂ, ಕೊಹ್ಲಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ, ಖಾಂದೀಲ್ ಬಾಲೋಚ್, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋ ಹಾಕಿದ್ದಾಳೆ. ಕೊಹ್ಲಿ, ನೀನು ಅನುಷ್ಕಾ ಶರ್ಮರನ್ನು ಮರೆತು ಬಿಡು, ನನ್ನ ಬಗ್ಗೆ ಯೋಚಿಸು ಎಂದಿದ್ದಾಳೆ.

ಭಾರತದ ಪೂನಂ ಪಾಂಡೆ ಕೊಹ್ಲಿಗಾಗಿ ಅರೆನಗ್ನ ಚಿತ್ರ ಹಾಕಿದ್ದಳು. ಅದೇ ರೀತಿಯಲ್ಲಿ ಖಾಂದೀಲ್ ಬಾಲೋಚ್ ಕೂಡ, ತಮ್ಮ ತಂಡ ಕ್ರಿಕೆಟ್ ಪಂದ್ಯ ಗೆದ್ದರೆ, ಬೆತ್ತಲಾಗುವುದಾಗಿ ಹೇಳಿದ್ದಳು. ಪಾಕ್ ತಂಡದ ನಾಯಕ ಶಾಹಿದ್ ಅಫ್ರಿದಿ ಬಗ್ಗೆ ತಲೆಕೆಡಿಸಿಕೊಂಡಿದ್ದಳು. ಈಗ ಕೊಹ್ಲಿಯ ಬೆನ್ನು ಬಿದ್ದಿದ್ದು, ಅನುಷ್ಕಾರನ್ನು ಮರೆತು ಬಿಡು ನನ್ನ ಬಗ್ಗೆ ಯೋಚಿಸು ಎಂದೆಲ್ಲಾ ಹೇಳಿದ್ದಾಳೆ. ಈ ವಿಡಿಯೋವನ್ನು ಹೆಚ್ಚಿನ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...