alex Certify
ಕನ್ನಡ ದುನಿಯಾ       Mobile App
       

Kannada Duniya

ಪದ್ಮಾವತಿ ಟ್ರೈಲರ್ ಪ್ರಸಾರ ಮಾಡಿದ್ದ ಥಿಯೇಟರ್ ಧ್ವಂಸ

ಶ್ರೀ ರಾಜ್ಪೂತ್ ಕರ್ಣಿ ಸೇನೆಗೆ ಸೇರಿದ ಸುಮಾರು 50 ಕಾರ್ಯಕರ್ತರು ಕೋಟಾದಲ್ಲಿ ಚಿತ್ರಮಂದಿರವೊಂದನ್ನು ಧ್ವಂಸ ಮಾಡಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಟ್ರೈಲರ್ ಪ್ರಸಾರ ಮಾಡಿದ್ದಕ್ಕೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ.

ಬುಕ್ಕಿಂಗ್ ಕೌಂಟರ್ , ಕಿಟಕಿ ಗಾಜು, ಗೇಟ್ ಎಲ್ಲವನ್ನೂ ಒಡೆದು ಹಾಕಿದ್ದಾರೆ. ಥಿಯೇಟರ್ ನಲ್ಲಿದ್ದ ಪೀಠೋಪಕರಣಗಳನ್ನೂ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಥಿಯೇಟರ್ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಅಶ್ರುವಾಯು ಪ್ರಯೋಗಕ್ಕೆ ಮುಂದಾದಾಗ ಕಾರ್ಯಕರ್ತರು ಪುಂಡಾಟ ನಿಲ್ಲಿಸಿದ್ರು. ಪ್ರತಿಭಟನಾ ನಿರತರಲ್ಲಿ 8 ಜನರನ್ನು ಬಂಧಿಸಲಾಗಿದೆ. 30-40 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದ್ರೆ ಯಾರ ವಿರುದ್ಧವೂ ಕೇಸ್ ದಾಖಲಾಗಿಲ್ಲ.

ರಾಣಿ ಪದ್ಮಾವತಿ ಬದುಕು ಆಧಾರಿತ ಚಿತ್ರ ಪದ್ಮಾವತಿ ಟೀಸರ್ ಅನ್ನು ಪ್ರಸಾರ ಮಾಡಬಾರದು ಅನ್ನೋದು ಕಾರ್ಯಕರ್ತರ ಒತ್ತಾಯ. ಈ ದಾಂಧಲೆ ಬಳಿಕ ಟ್ರೈಲರ್ ಪ್ರಸಾರವನ್ನು ನಿಲ್ಲಿಸಲಾಗಿದೆ. ನಿನ್ನೆ ಕೂಡ ಪದ್ಮಾವತಿ ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆದಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...