alex Certify
ಕನ್ನಡ ದುನಿಯಾ       Mobile App
       

Kannada Duniya

4 ರಾಜ್ಯಗಳ ನಿಷೇಧ ವಿರೋಧಿಸಿ ಸುಪ್ರೀಂ ಮೊರೆ ಹೋದ ‘ಪದ್ಮಾವತ್’

ಸಂಜಯ್ ಲೀಲಾ ಬನ್ಸಾಲಿ ಚಿತ್ರ ‘ಪದ್ಮಾವತ್’ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಚಿತ್ರ ನಿರ್ಮಾಪಕ ಕಂಪನಿ ವೈಕಾಮ್ 18 ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ. ನಾಲ್ಕು ರಾಜ್ಯಗಳಲ್ಲಿ ‘ಪದ್ಮಾವತ್’ ಚಿತ್ರ ಬ್ಯಾನ್ ಆಗಿದ್ದು, ಇದನ್ನು ಪ್ರಶ್ನಿಸಿ ವೈಕಾಮ್ 18 ಕೋರ್ಟ್ ಮೆಟ್ಟಿಲೇರಿದೆ.

ಶೀಘ್ರದಲ್ಲಿಯೇ ಪ್ರಕರಣದ ವಿಚಾರಣೆ ನಡೆಸಬೇಕೆಂದು ವೈಕಾಮ್ 18 ಮನವಿ ಮಾಡಿದೆ. ಪದ್ಮಾವತ್ ಚಿತ್ರಕ್ಕೆ ದೇಶದಾದ್ಯಂತ ಕರಣಿ ಸೇನೆ ವಿರೋಧ ವ್ಯಕ್ತಪಡಿಸುತ್ತಿದೆ. ಜನವರಿ 25ರಂದು ಪದ್ಮಾವತ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದ್ರೆ ರಾಜಸ್ತಾನ, ಗುಜರಾತ್, ಹರ್ಯಾಣ ಹಾಗೂ ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಯನ್ನು ನಿಷೇಧಿಸಲಾಗಿದೆ.

ಬಿಜೆಪಿ ಆಡಳಿತವಿರುವ ಗೋವಾ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲೂ ಚಿತ್ರದ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ. ಇದನ್ನು ಪ್ರಶ್ನಿಸಿ ವೈಕಾಮ್ 18 ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಈಗಾಗಲೇ ಚಿತ್ರ ಬಿಡುಗಡೆಗೆ ಸೆನ್ಸಾರ್ ಬೋರ್ಡ್ ಒಪ್ಪಿಗೆ ನೀಡಿದೆ. ಯು/ಎ ಸರ್ಟಿಫಿಕೇಟ್ ನೊಂದಿಗೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಆದ್ರೆ ನಾಲ್ಕು ರಾಜ್ಯಗಳಲ್ಲಿ ಚಿತ್ರಕ್ಕೆ ನಿಷೇಧ ಹೇರಿರುವುದು ವೈಕಾಮ್ 18 ಗೆ ನುಂಗಲಾರದ ತುತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...