alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಹಿರಿಯ ನಟಿ ರೀಟಾ ಬಾಧುರಿ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟಿ ರೀಟಾ ಬಾಧುರಿ ಇಹಲೋಕ ತ್ಯಜಿಸಿದ್ದಾರೆ. ರೀಟಾ ನಿಧನದ ವಿಚಾರವನ್ನು ನಟ ಶಿಶಿರ್ ಶರ್ಮಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜುಲೈ 17ರಂದು ಮಧ್ಯಾಹ್ನ ಅವ್ರ ಅಂತ್ಯಕ್ರಿಯೆ ಅಂಧೇರಿಯಲ್ಲಿ ನಡೆಯಲಿದೆ.

ವರದಿಗಳ ಪ್ರಕಾರ, ರೀಟಾ ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನೇಕ ದಿನಗಳಿಂದ ರೀಟಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಎರಡು ದಿನಕ್ಕೊಮ್ಮೆ ರೀಟಾ ಡಯಾಲಿಸಿಸ್ ಗೆ ಹೋಗ್ತಿದ್ದರು ಎನ್ನಲಾಗಿದೆ. ಅನಾರೋಗ್ಯದ ಮಧ್ಯೆಯೇ ರೀಟಾ ಚಿತ್ರೀಕರಣಕ್ಕೆ ಬರ್ತಿದ್ದರು ಎನ್ನಲಾಗಿದೆ. ಸಮಯ ಸಿಕ್ಕಾಗ ಶೂಟಿಂಗ್ ಸ್ಥಳದಲ್ಲಿಯೇ ಆರಾಮ ಮಾಡುತ್ತಿದ್ದರು.

ರೀಟಾ ಹಿರಿ ತೆರೆ ಹಾಗೂ ಕಿರಿ ತೆರೆ ಎರಡರಲ್ಲೂ ಕೆಲಸ ಮಾಡಿದ್ದರು. ಎಲ್ಲರಿಗೂ ತಾಯಿಯಂತಿದ್ದರು. ಅವ್ರ ನಿಧನ ತುಂಬಲಾಗದ ನಷ್ಟವೆಂದು ಶಿಶಿರ್ ಶರ್ಮಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...