alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಣ್ಣ ಹೇಳಿದ್ರೂ ನಿಲ್ಲುತ್ತಿಲ್ಲ ‘ಟಗರು’ ಸಂಭಾಷಣೆ ವಿವಾದ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೇ ವೇಳೆ ಚಿತ್ರದಲ್ಲಿನ ಸಂಭಾಷಣೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ಖಳನಾಯಕರಾದ ಧನಂಜಯ, ವಸಿಷ್ಠ ಸಿಂಹ ಅವರು ಶಿವಣ್ಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಶಿವರಾಜ್ ಕುಮಾರ್ ಅಭಿಮಾನಿಗಳು ಮತ್ತು ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಸೇನಾ ಸಮಿತಿಯ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ಸೂರಿ ಕೂಡಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಅವರು ಕ್ಷಮೆ ಕೇಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಿಡುಗಡೆ ದಿನವೇ ಅಭಿಮಾನಿಗಳು ಆಕ್ಷೇಪಿಸಿದ್ದ ಸಂದರ್ಭದಲ್ಲಿ ಶಿವಣ್ಣ ಪ್ರತಿಕ್ರಿಯೆ ನೀಡಿ, ಚಿತ್ರದಲ್ಲಿ ನಾಯಕ ಬೈದಾಡಿದಾಗ ಶಿಳ್ಳೆ ಚಪ್ಪಾಳೆ ಹೊಡೆಯುವುದಿಲ್ಲವೇ? ಇದು ಅದೇ ರೀತಿ. ಸಿನಿಮಾದಲ್ಲಿ ವಿಲನ್ ಬೈದ್ರೇ ತಪ್ಪೇನು ಎಂದ ಪ್ರಶ್ನಿಸಿದ್ದು, ಚಿತ್ರದಲ್ಲಿ ಯಾವುದೇ ಸಂಭಾಷಣೆಗೆ ಕತ್ತರಿ ಹಾಕದಂತೆ ಹೇಳಿದ್ದಾರೆ ಎನ್ನಲಾಗಿದೆ.

ಈಗ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಗುಡುಗಿದ್ದಾರೆ. ಶಿವಣ್ಣನ ರೇಂಜ್ ಗೊತ್ತಾ? ಅವರು ಯಾವತ್ತಿದ್ರೂ ಹೀರೋ, ಅವರು ನನಗೆ ಇಷ್ಟ. ಅವರ ಬಗ್ಗೆ ಅವಹೇಳನಕಾರಿ ಡೈಲಾಗ್ ಬಳಸಿರುವುದು ಸರಿಯಲ್ಲ. ಕೂಡಲೇ ಶಿವಣ್ಣರನ್ನು ಬೈಯ್ಯುವ ಸಂಭಾಷಣೆ ಮ್ಯೂಟ್ ಮಾಡಬೇಕು. ಇಲ್ಲವಾದ್ರೆ ಶಿವಣ್ಣನ ಫ್ಯಾನ್ಸ್ ಹಾಗೂ ನಮ್ಮ ಹುಡುಗ್ರು ಸುಮ್ಮನೆ ಇರಲ್ಲ ಎಂದು ‘ಟಗರು’ ಸ್ಟೈಲ್ ನಲ್ಲೇ ಬೆದರಿಕೆ ಹಾಕಿದ್ದಾರೆ.

ಶಿವಣ್ಣ ಪ್ರತಿಕ್ರಿಯೆ ನೀಡಿದ ಬಳಿಕವೂ ಅಭಿಮಾನಿಗಳಿಗೆ ಸಮಾಧಾನವಾಗಿಲ್ಲ. ನೆಚ್ಚಿನ ನಟನಿಗೆ ಬೈದಾಡಿರುವುದನ್ನು ತೆಗೆಯಬೇಕೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...