alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ವೇದಿಕೆಯಲ್ಲಿ ವೆಂಕಟ್ ಭರ್ಜರಿ ಡ್ಯಾನ್ಸ್

30-1446186795-4-huccha-venkat

‘ಬಿಗ್ ಬಾಸ್’ ಮನೆಯಲ್ಲಿ ಗಾಯಕ ರವಿ ಮುರೂರು ಅವರ ಮೇಲೆ ಹಲ್ಲೆ ಮಾಡಿದ್ದ ವೆಂಕಟ್ ಮತ್ತೆ ‘ಬಿಗ್ ಬಾಸ್’ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀಸನ್ ನಲ್ಲಿ ಸ್ಪರ್ಧಿಗಳಾಗಿದ್ದವರೆಲ್ಲಾ ಕಡೆ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅವರೊಂದಿಗೆ ವೆಂಕಟ್ ಅವರೂ ಇದ್ದರು.

ವೇದಿಕೆಗೆ ಬಂದ ವೆಂಕಟ್ ಅವರನ್ನು ಸುದೀಪ್ ಸ್ವಾಗತಿಸಿದರು. ನಂತರ ವೆಂಕಟ್ ಅವರು ಸೀದಾ ಹೋಗಿ ಕುಳಿತಿದ್ದು, ರವಿ ಮುರೂರು ಅವರ ಬಳಿ. ಆಗ ಸುದೀಪ್ ಕೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿದ ರವಿ, ಒಂದು ಮನೆಯೆಂದ ಮೇಲೆ ಅಣ್ಣ, ತಮ್ಮನ ನಡುವೆ ಜಗಳ, ಕೋಪ ಸಹಜ, ಅದನ್ನೆಲ್ಲಾ ಇಬ್ಬರೂ ಮರೆತಿದ್ದೇವೆ ಎಂದರು. ವೆಂಕಟ್ ಮಾತನಾಡಿ, ‘ಬಿಗ್ ಬಾಸ್’ ಮನೆಯಲ್ಲಿ ಅನ್ನ ತಿಂದಿದ್ದೇನೆ. ಅದರ ಋಣ ತೀರಿಸಲು ಬಂದಿದ್ದೇನೆ. ನನ್ನ ಪ್ರಕಾರ ಸಿಸ್ಟರ್ ಪೂಜಾ ಗಾಂಧಿ ಅವರು ಗೆಲ್ಲಬಹುದು ಎಂದರು. ಅಲ್ಲದೇ, ಹಾಡೊಂದಕ್ಕೆ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.

ಸ್ಪರ್ಧಿಗಳಾಗಿದ್ದ ಸುಷ್ಮಾ, ಸುನಾಮಿ ಕಿಟ್ಟಿ, ಕೃತಿಕಾ, ನೇತ್ರಾ, ನೇಹಾ, ಅಯ್ಯಪ್ಪ, ವೆಂಕಟ್, ರವಿ ಸೇರಿದಂತೆ ಎಲ್ಲರೂ ಆಗಮಿಸಿದ್ದರು. ಈ ವೇಳೆ ಸ್ಪರ್ಧಿಗಳಿಂದ ಭರ್ಜರಿ ನೃತ್ಯ ಪ್ರದರ್ಶನ ಕೂಡ ನಡೆಯಿತು. ಸುದೀಪ್ ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದು ವಿಶೇಷವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...