alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯಲ್ಲಿ ಸೋನಂ, ಕರೀನಾ

ಬಾಲಿವುಡ್ ಬೆಡಗಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಮದುವೆ ತಯಾರಿ ಜೋರಾಗಿ ನಡೆದಿದೆ. ಆನಂದ್ ಅಹುಜಾ ಜೊತೆ ಸೋನಂ ಕಪೂರ್ ಮೇ 8 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾಳೆ. ಮೆಹಂದಿ ಹಾಗೂ ಅರಿಶಿನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಂದು ಕಡೆ ಸೋನಂ ಮದುವೆ ತಯಾರಿಯಲ್ಲಿದ್ದರೆ ಮತ್ತೊಂದು ಕಡೆ ಸೋನಂ ಅಭಿನಯದ ‘ವೀರ್ ದಿ ವೆಡ್ಡಿಂಗ್’ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡು ಸೋನಂ ಬ್ಯಾಚುಲರ್ ಪಾರ್ಟಿಗೆ ಹೇಳಿ ಮಾಡಿಸಿದ ಹಾಡಾಗಿದೆ. ಸೋನಂ ಕಪೂರ್ ಹಾಗೂ ಕರೀನಾ ಕಪೂರ್ ಹಾಡಿನಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೋನಂ ಕಪೂರ್, ಕರೀನಾ ಜೊತೆ ಸ್ವರಾ ಬಾಸ್ಕರ್ ಕೂಡ ಹಾಡಿನಲ್ಲಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ನಲ್ಲಿ ಹಾಗೂ ಹಾಡಿನಲ್ಲಿ ಕರೀನಾ ಹಾಗೂ ಸೋನಂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಗ್ಗೆ ಆಗ್ಲೇ ಚರ್ಚೆಗಳಾಗಿವೆ. ಈಗ ಹಾಡಿಗೆ ಪ್ರೇಕ್ಷಕರು ಏನು ಹೇಳ್ತಾರೆ ನೋಡಬೇಕಿದೆ. ಸದ್ಯ ಹಾಡು ಸೋನಂ ಕಪೂರ್ ಬ್ಯಾಚುಲರ್ ಪಾರ್ಟಿಗೆ ಸರಿಯಾಗಿ ಹೊಂದುತ್ತಿದೆ ಎಂದು ಪ್ರೇಕ್ಷಕರು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...