alex Certify
ಕನ್ನಡ ದುನಿಯಾ       Mobile App
       

Kannada Duniya

‘ವೀರೆ ದಿ ವೆಡ್ಡಿಂಗ್’ ಫಸ್ಟ್ ಲುಕ್ ನಲ್ಲಿ ನಾಯಕಿಯರ ದಂಡು

ಬಹುತಾರಾಗಣವುಳ್ಳ ಬಹುನಿರೀಕ್ಷಿತ ಚಿತ್ರ ‘ವೀರೆ ದಿ ವೆಡ್ಡಿಂಗ್ ‘ನ ಫಸ್ಟ್ ಲುಕ್ ರಿಲೀಸ್ ಆಗಿದೆ.  ಕರೀನಾ ಕಪೂರ್, ಸೋನಂ ಕಪೂರ್, ಸ್ವರಾ ಭಾಸ್ಕರ್ ಹೀಗೆ ಘಟಾನುಘಟಿ ನಟಿಯರು ಈ ಚಿತ್ರದಲ್ಲಿ ಒಟ್ಟಿಗೆ ನಟಿಸ್ತಿದ್ದಾರೆ.

ಅಮ್ಮನಾದ ಬಳಿಕ ಇದೇ ಮೊದಲ ಬಾರಿಗೆ ಕರೀನಾ ಬಣ್ಣ ಹಚ್ಚಿದ್ದಾಳೆ. ತೂಕ ಇಳಿಸಿಕೊಂಡು ವೀರೆ ದಿ ವೆಡ್ಡಿಂಗ್ ಸಿನೆಮಾಕ್ಕಾಗಿಯೇ ಸಖತ್ ಸ್ಲಿಮ್ ಆಗಿದ್ದಾಳೆ. ಚಿತ್ರದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ.

ಆದ್ರೆ ಕಲರ್ಫುಲ್ ಆಗಿರೋ ಫಸ್ಟ್ ಲುಕ್ ನೋಡಿದವರೆಲ್ಲ ಸಿನೆಮಾ ಯಾವಾಗ ಬಿಡುಗಡೆಯಾಗತ್ತೋ ಅನ್ನೋ ಕುತೂಹಲದಲ್ಲಿದ್ದಾರೆ. ಶಶಾಂಕ ಘೋಷ್ ಈ ಚಿತ್ರವನ್ನು ನಿರ್ದೇಶಿಸಿದ್ದು, 2018ರಲ್ಲಿ ತೆರೆಗೆ ಬರಲಿದೆ.

ಚಿತ್ರೀಕರಣದ ಸಂದರ್ಭದಲ್ಲಿ ನಾಯಕಿಯರ ಮಧ್ಯೆ ಕಿತ್ತಾಟ ನಡೆದಿದೆ ಅನ್ನೋ ಗುಲ್ಲೆದ್ದಿತ್ತು. ಆದ್ರೆ ಅದೆಲ್ಲಾ ಸಂಪೂರ್ಣ ಸುಳ್ಳು ಸುದ್ದಿ ಅಂತಾ ಖುದ್ದು ಸೋನಂ ಕಪೂರ್ ಸ್ಪಷ್ಟನೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...