alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ತೆರೆ ಕಾಣುತ್ತಿಲ್ಲ ಸೋನಂ ಚಿತ್ರ! ಇದಂತೆ ಕಾರಣ!!

ಸೋನಂ ಕಪೂರ್, ಕರೀನಾ ಕಪೂರ್, ಸ್ವರಾ ಭಾಸ್ಕರ್ ಹಾಗೂ ಶಿಖಾ ಅಭಿನಯದ ‘ವೀರೆ ದಿ ವೆಡ್ಡಿಂಗ್’ ಚಿತ್ರ ಜೂನ್ 1 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದ್ದು, ಶಶಾಂಕ್ ಘೋಷ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಾಲ್ವರು ಗೆಳತಿಯರ ಜೀವನ ಕುರಿತ ಕಥೆ ಹೊಂದಿರುವ ಈ ಚಿತ್ರವನ್ನು ರಿಯಾ ಕಪೂರ್, ಏಕ್ತಾ ಕಪೂರ್ ಹಾಗೂ ನಿಖಿಲ್ ದ್ವಿವೇದಿ ನಿರ್ಮಿಸಿದ್ದಾರೆ. ತಾಯಿಯಾದ ನಂತರ ಕರೀನಾ ಕಪೂರ್ ಗೆ ಇದು ಮೊದಲ ಚಿತ್ರವಾದರೆ, ಸೋನಂ ಕಪೂರ್, ಆನಂದ್ ಅಹುಜಾ ಜೊತೆ ವಿವಾಹವಾದ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರವಾಗಿದೆ.

ಈ ಮಧ್ಯೆ ‘ವೀರೆ ದಿ ವೆಡ್ಡಿಂಗ್’ ಚಿತ್ರ ಪಾಕಿಸ್ತಾನದಲ್ಲಿ ತೆರೆಕಾಣುತ್ತಿಲ್ಲವೆನ್ನಲಾಗಿದ್ದು, ಚಿತ್ರದಲ್ಲಿ ಅಶ್ಲೀಲ ಸಂಭಾಷಣೆ ಹಾಗೂ ಅಶ್ಲೀಲ ದೃಶ್ಯಗಳಿರುವ ಕಾರಣ ಪಾಕಿಸ್ತಾನ ಸೆನ್ಸಾರ್ ಮಂಡಳಿ ಬಿಡುಗಡೆಗೆ ನಿರಾಕರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...