alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಕಾಟಕ್ಕೆ ಬೇಸತ್ತ ನಟ ಮಾಡಿದ್ದೀಗೆ….

ಬಾಲಿವುಡ್ ನಟ ವರುಣ್ ಧವನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಅದರಲ್ಲಿಯೂ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರು ಹೈರಾಣಾಗಿದ್ದಾರೆ.

ವರುಣ್ ಧವನ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬಳು ಅನಗತ್ಯ ಕಿರುಕುಳ ನೀಡಿದ್ದಾಳೆ. ಇದರಿಂದ ಬೇಸತ್ತ ವರುಣ್ ಮುಂಬೈನ ಸಾಂತ್ರಾಕ್ರೂಜ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಅಭಿಮಾನಿಗಳಿಂದ ಲೆಕ್ಕವಿಲ್ಲದಷ್ಟು ವಾಟ್ಸಾಪ್ ಸಂದೇಶಗಳನ್ನು ವರುಣ್ ಸ್ವೀಕರಿಸುತ್ತಾರೆ. ಅದರಲ್ಲಿ ಯುವತಿಯೊಬ್ಬಳು ಹೆಚ್ಚಿನ ಸಂಖ್ಯೆಯಲ್ಲಿ ಸಂದೇಶ ಕಳಿಸಿದ್ದರಿಂದ ಅದನ್ನು ತಡೆದಿದ್ದಾರೆ. ಯುವತಿಯ ಸಂಖ್ಯೆಯನ್ನು ನಿರ್ಬಂಧಿಸಿದ್ದಾರೆ.

ಆದರೆ, ಯುವತಿ ಪರವಾಗಿ ಮತ್ತೊಂದು ಮೊಬೈಲ್ ನಿಂದ ಕರೆ ಬಂದಿದ್ದು, ನೀವು ಸಂದೇಶಗಳಿಗೆ ಪ್ರತ್ಯುತ್ತರ ನೀಡದಿದ್ದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ಹೇಳಲಾಗಿದೆ.

ಇದರಿಂದ ಕಂಗಾಲಾದ ವರುಣ್ ಧವನ್ ಕಾನೂನು ತಂಡದಿಂದ ಸಲಹೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಂತಾಕ್ರೂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ನಾವು ವರುಣ್ ಧವನ್ ಅವರಿಂದ ದೂರು ಸ್ವೀಕರಿಸಿದ್ದೇವೆ. ಕರೆ ಮಾಡಿದಂದಿನಿಂದ ಸಂಖ್ಯೆಯನ್ನು ಬದಲಿಸಲಾಗಿದ್ದು, ವ್ಯಕ್ತಿಯ ಮಾಹಿತಿ ಕಲೆ ಹಾಕಲು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವರುಣ್ ಧವನ್ ‘ಶೂಜಿತ್ ಸಿರ್ಕಾರ್’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...