alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್: ರಣವೀರ್ ಗಿಂತ ಈ ನಟನಿಗೆ ಸಿಗಲಿದೆ ಹೆಚ್ಚು ಸಂಭಾವನೆ

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಯಾವ ನಟರಿಗೆ ಹೆಚ್ಚು ಸಂಭಾವನೆ ನೀಡಲಾಗ್ತಿದೆ ಎಂಬ ಚರ್ಚೆ ಈಗ ಬಿಸಿ ಪಡೆದಿದೆ. ಕೆಲ ದಿನಗಳ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ರಣವೀರ್ ಸಿಂಗ್ ಹೆಸರು ಕೇಳಿ ಬಂದಿತ್ತು. 15 ನಿಮಿಷಗಳ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ 5 ಕೋಟಿ ಪಡೆಯುತ್ತಿದ್ದಾರೆ. ಆದ್ರೆ ರಣವೀರ್ ಗಿಂತ ವರುಣ್ ಧವನ್ ಸಂಭಾವನೆ ಇನ್ನೂ ಹೆಚ್ಚು ಎಂಬುದು ಗೊತ್ತಾಗಿದೆ.

ಡಿಎನ್ಎ ವರದಿ ಪ್ರಕಾರ, ವರುಣ್ ಧವನ್ ಗೆ ಹೆಚ್ಚು ಹಣದ ಆಫರ್ ನೀಡಲಾಗಿದೆ. ಆರ್ಗನೈಸರ್ಸ್ ಸುಮಾರು 6 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಪ್ರೇಕ್ಷಕರೊಂದಿಗೆ ವರುಣ್, ರಣವೀರ್ ಸಿಂಗ್ ಗಿಂತ ಹೆಚ್ಚು ಸಂಪರ್ಕ ಹೊಂದಿದ್ದಾರೆ. ಜೊತೆಗೆ ಅವ್ರ ಜನಪ್ರಿಯತೆ ನೋಡಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗ್ತಿದೆ.

ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಜಾಕ್ವೆಲಿನ್ ಜೊತೆ ವರುಣ್ ನೃತ್ಯ ಮಾಡಲಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನ ಅನೇಕ ಸ್ಟಾರ್ಸ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 45 ನಿಮಿಷಗಳ ಡಾನ್ಸ್ ಕಾರ್ಯಕ್ರಮದ ನಂತ್ರ ಐಪಿಎಲ್-11 ಸರಣಿ ಪಂದ್ಯಾವಳಿ ಶುರುವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...