alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಜೊತೆ ಸೆಲ್ಫಿ ತೆಗೆದುಕೊಳ್ಳಲೋಗಿ ಸಂಕಷ್ಟಕ್ಕೆ ಸಿಲುಕಿದ ನಟ

ಅಭಿಮಾನಿ ಜೊತೆ ಟ್ರಾಫಿಕ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ನಟ ವರುಣ್ ಧವನ್ ಮುಂಬೈ ಪೊಲೀಸರ ಬಳಿ ಕ್ಷಮೆ ಕೇಳಿದ್ದಾರೆ. ವರುಣ್ ಧವನ್ ತಮ್ಮ ಕಾರಿನ ಮುಂಬದಿ ಸೀಟಿನಲ್ಲಿ ಕುಳಿತಿದ್ರು. ಟ್ರಾಫಿಕ್ ಇದ್ದಿದ್ರಿಂದ ಕಾರು ನಿಂತಿತ್ತು. ಪಕ್ಕದಲ್ಲೇ ಆಟೋ ಬಂದು ನಿಂತಿದೆ.

ಆಟೋದಲ್ಲಿ ಕುಳಿತಿದ್ದ ಯುವತಿ ವರುಣ್ ಧವನ್ ರನ್ನು ನೋಡಿ ಫುಲ್ ಖುಷಿಯಾಗಿದ್ಲು. ತನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುವಂತೆ ಕೇಳಿದ್ದಾಳೆ. ಆಗ ವರುಣ್ ಧವನ್ ಕಾರಿನ ಕಿಟಕಿಯಿಂದ ಹೊರಗಿಣುಕಿದ್ದಾರೆ, ಯುವತಿ ಕೂಡ ಆಟೋದಿಂದ ಹೊರಕ್ಕೆ ತಲೆಹಾಕಿದ್ದಾಳೆ. ಇಬ್ಬರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗ್ತಿದ್ದಂತೆ ಮುಂಬೈ ಪೊಲೀಸರು ವರುಣ್ ಧವನ್ ವರ್ತನೆಯನ್ನು ಖಂಡಿಸಿದ್ರು. ಈ ರೀತಿ ಟ್ರಾಫಿಕ್ ನಲ್ಲಿ ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳುವುದು ತಪ್ಪು ಅಂತಾ ಹೇಳಿದ್ರು. ವರುಣ್ ತಮ್ಮ ಜೀವಕ್ಕೆ ಮಾತ್ರವಲ್ಲ ಅಭಿಮಾನಿಯ ಜೀವಕ್ಕೂ ಅಪಾಯ ತರುವ ಸಾಧ್ಯತೆ ಇತ್ತು ಅಂತಾ ಹೇಳಿದ್ರು.

ಜವಾಬ್ಧಾರಿಯುತ ಯುವ ಐಕಾನ್ ಆಗಿರೋ ನಟನಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಅಂತಾ ನೇರವಾಗಿಯೇ ನುಡಿದಿದ್ದರು. ಭವಿಷ್ಯದಲ್ಲಿ ಇಂತಹ ಕೃತ್ಯ ನಡೆಸಿದ್ದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ವರುಣ್ ಕ್ಷಮೆ ಕೇಳಿದ್ದಾರೆ. ಇನ್ಮೇಲೆ ಈ ಬಗ್ಗೆ ಎಚ್ಚರ ವಹಿಸೋದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...