alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚ ಸುದೀಪ್ ವಿರುದ್ದದ ವಂಚನೆ ಆರೋಪಕ್ಕೆ ನಿರ್ಮಾಪಕರು ಹೇಳಿದ್ದೇನು…?

ಸೀರಿಯಲ್ ಶೂಟಿಂಗ್ ಗೆ ಬಾಡಿಗೆ ಕೊಡದೇ ಕಿಚ್ಚ ಸುದೀಪ್ ವಂಚಿಸಿದ್ದಾರೆ ಎಂಬ ದೀಪಕ್ ಮಯೂರ್ ಆರೋಪಕ್ಕೆ ವಾರಸ್ದಾರ ಧಾರಾವಾಹಿ ಕಾರ್ಯಕಾರಿ ನಿರ್ಮಾಪಕ ಮಹೇಶ್ ಪ್ರತಿಕ್ರಿಯೆ ನೀಡಿದ್ದು, ದೀಪಕ್ ಮಯೂರ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ದೀಪಕ್ ವೃಥಾ ಸುಳ್ಳು ಆರೋಪ ಮಾಡುತ್ತಿದ್ದಾರೆ.  ಈ ಹಿಂದೆಯೂ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ದೀಪಕ್ ದೂರು ದಾಖಲಿಸಿದ್ದರು. ಆದರೆ ಕೋರ್ಟ್ ಗೆ ಹೋಗಿ ಬಗೆಹರಿಸಿಕೊಳ್ಳಿ ಎಂದು ಹೇಳಿದ ವೇಳೆ ನ್ಯಾಯಾಲಯದಲ್ಲೂ ಪ್ರಕರಣ ದಾಖಲಿಸಿದ್ದರು ಎಂದು ಮಹೇಶ್ ಹೇಳಿದ್ದಾರೆ.

ಆದರೆ ನ್ಯಾಯಾಲಯದಲ್ಲಿ ದಾಖಲಾತಿ ಕೇಳಿದಾಗ ಅದನ್ನು ನೀಡಲು ದೀಪಕ್ ವಿಫಲರಾಗಿದ್ದಾರೆ. ಶೂಟಿಂಗ್ ವೇಳೆ ನಮಗೆ ತಂಗಲು ಮನೆಯ ಅವಶ್ಯಕತೆ ಇಲ್ಲವೆಂದರೂ ಶೂಟಿಂಗ್ ಬಳಿಕ ಅದನ್ನು ಹೋಂ ಸ್ಟೇ ಆಗಿ ಪರಿವರ್ತಿಸುವುದಾಗಿ ದೀಪಕ್ ಹೇಳಿದ್ದರು ಎಂದು ಮಹೇಶ್ ವಿವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...