alex Certify
ಕನ್ನಡ ದುನಿಯಾ       Mobile App
       

Kannada Duniya

ದುರಂತ ಸಾವು ಕಂಡ ಶಾರುಖ್ ಅಭಿಮಾನಿ

saruk

ವಡೋದರಾ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ, ‘ರಯೀಸ್’ ಚಿತ್ರ ಜನವರಿ 25 ರಂದು ರಿಲೀಸ್ ಆಗಲಿದ್ದು, ಈಗಾಗಲೇ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆದಿದೆ.

ಶಾರುಖ್ ಖಾನ್ ಮತ್ತು ಚಿತ್ರ ತಂಡದವರು ರೈಲಿನಲ್ಲಿ ಪ್ರಯಾಣಿಸುವ ಮೂಲಕ ವಿಭಿನ್ನವಾಗಿ ಚಿತ್ರದ ಪ್ರಚಾರ ನಡೆಸುತ್ತಿದ್ದಾರೆ.

ಗುಜರಾತ್ ನ ವಡೋದರಾದಲ್ಲಿ ಶಾರುಖ್ ನೋಡಲು ಬಂದಿದ್ದ ಅಭಿಮಾನಿಯೊಬ್ಬ ಸಾವು ಕಂಡಿದ್ದಾನೆ. ರೈಲಿನಲ್ಲಿ ಆಗಮಿಸಿದ ಶಾರುಖ್ ಅವರನ್ನು ನೋಡಲು ವಡೋದರಾ ನಿಲ್ದಾಣದಲ್ಲಿ ಭಾರೀ ಅಭಿಮಾನಿಗಳು ಸೇರಿದ್ದರು.

ರೈಲಿನಿಂದಲೇ ಶಾರುಖ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ಅಲ್ಲಿಂದ ಹೊರಟಿದ್ದಾರೆ. ರೈಲು ಮುಂದೆ ಹೋದ ಬಳಿಕ ಅಭಿಮಾನಿಗಳು ಹೊರ ಹೋಗುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಶೇಖ್ ಅಹ್ಮದ್ ಎಂಬ ಅಭಿಮಾನಿಗೆ ಹೃದಯಾಘಾತವಾಗಿ, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಶೇಖ್ ಅಹ್ಮದ್ ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಶಾರುಖ್ ಖಾನ್, ಮೃತ ಅಭಿಮಾನಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಗಾಯಾಳು ಪೊಲೀಸರ ಚಿಕಿತ್ಸಾ ವೆಚ್ಛ ಭರಿಸುವುದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...