alex Certify
ಕನ್ನಡ ದುನಿಯಾ       Mobile App
       

Kannada Duniya

2018 ರಲ್ಲಿ ಗುಡ್ ನ್ಯೂಸ್ ಕೊಡ್ತಾರಾ ಈ ತಾರಾ ಜೋಡಿಗಳು…?

ಬಹುಭಾಷಾ ನಟಿ ಶ್ರಿಯಾ ಸರಣ್, ರಷ್ಯಾದ ಉದ್ಯಮಿ ಆಂಡ್ರೇ ಕೊಸ್ಚೆವೆವ್ ಜೊತೆ ಡೇಟಿಂಗ್ ನಡೆಸ್ತಿದ್ದಾಳೆ. ಮಾರ್ಚ್ ನಲ್ಲಿ ಶ್ರಿಯಾ, ವಿದೇಶಿ ಪ್ರಿಯತಮನ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ಉದಯ್ಪುರದಲ್ಲಿ ಮಾರ್ಚ್ 17, 18, 19ರಂದು ಮದುವೆ ಸಮಾರಂಭಗಳು ನೆರವೇರಲಿವೆ.

ಬಾಲಿವುಡ್ ನ ಇನ್ನೊಂದಷ್ಟು ಜೋಡಿ ಹಕ್ಕಿಗಳು ಕೂಡ ಈ ವರ್ಷ ಮದುವೆಯಾಗೋ ಸಾಧ್ಯತೆ ಇದೆ. ಅವರ ಪೈಕಿ ದೀಪಿಕಾ-ರಣವೀರ್ ಸಿಂಗ್ ಜೋಡಿಯೂ ಒಂದು. ಬಹಳ ದಿನಗಳಿಂದ ಇಬ್ಬರೂ ರಿಲೇಶನ್ಷಿಪ್ ನಲ್ಲಿದ್ದು, ಈ ವರ್ಷ ಇವರ ಪ್ರೀತಿಗೆ ಮದುವೆಯ ಮುದ್ರೆ ಬೀಳಬಹುದು ಅನ್ನೋದು ಅಭಿಮಾನಿಗಳ ನಿರೀಕ್ಷೆ.

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಆನ್ ಸ್ಕ್ರೀನ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫಲ್ಲೂ ಜೋಡಿ ಹಕ್ಕಿಗಳು. ಕೆಲ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಹಲವಾರು ಪಾರ್ಟಿ, ಫಂಕ್ಷನ್ ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ದಿಶಾ ಹಾಗೂ ಟೈಗರ್ ಕೂಡ ಈ ವರ್ಷ ಹೊಸಬಾಳಿಗೆ ಅಡಿ ಇಡಬಹುದು.

ಡಿಸೈನರ್ ನತಾಶಾ ದಲಾಲ್ ಜೊತೆ ವರುಣ್ ಧವನ್ ಡೇಟಿಂಗ್ ನಡೆಸ್ತಿರೋದು ಓಪನ್ ಸೀಕ್ರೆಟ್. ನತಾಶಾಳನ್ನು ಪ್ರೀತಿಸ್ತಿರೋದಾಗಿ ಖುದ್ದು ವರುಣ್ ಒಪ್ಪಿಕೊಂಡಿದ್ದಾರೆ. ಸಮಾರಂಭಗಳಿಗೆಲ್ಲ ಇವರು ಜೋಡಿಯಾಗಿಯೇ ಬರ್ತಾರೆ. ಹಾಗಾಗಿ ಈ ವರ್ಷ ಹಸೆಮಣೆ ಏರಬಹುದು.

ಸಲ್ಮಾನ್ ಖಾನ್ ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ. ಆದ್ರೆ ಇದುವರೆಗೆ ಯಾರನ್ನೂ ಸಲ್ಲು ಕೈಹಿಡಿದಿಲ್ಲ. ಆದ್ರೆ ಲೂಲಿಯಾ ವಂತುರ್ ಸಲ್ಲು ಫ್ಯಾಮಿಲಿ ಜೊತೆಗೂ ಕ್ಲೋಸ್ ಆಗಿದ್ದಾರೆ. ಪೂಜೆ, ಪಾರ್ಟಿ, ಫಂಕ್ಷನ್ ಎಲ್ಲದಕ್ಕೂ ಹಾಜರಾಗ್ತಾರೆ . ಇದನ್ನೆಲ್ಲ ನೋಡಿದ್ರೆ ಸಲ್ಲು-ಲೂಲಿಯಾ ಲವ್ ಫಿಕ್ಸ್ ಆಗಿರುವಂತಿದೆ. ಈ ಜೋಡಿ ಈ ವರ್ಷವೇ ಮದುವೆಯಾಗಲಿ ಅನ್ನೋದು ಅಭಿಮಾನಿಗಳ ಆಸೆ.

ಸೋನಂ ಕಪೂರ್ ಹೆಸರು ಉದ್ಯಮಿ ಆನಂದ್ ಅಹುಜಾ ಜೊತೆ ಕೇಳಿಬರ್ತಿದೆ. ಆದ್ರೆ ಖುದ್ದು ಸೋನಂ ಈ ವಿಚಾರವನ್ನು ಒಮ್ಮೆಯೂ ಒಪ್ಪಿಕೊಂಡಿಲ್ಲ. ಇಬ್ಬರೂ ಜೊತೆಯಾಗಿ ದೇಶ- ವಿದೇಶ ಸುತ್ತಿದ್ದಾರೆ. ಈ ಜೋಡಿ ಕೂಡ 2018ರಲ್ಲೇ ಹೊಸ ಬಾಳು ಪ್ರವೇಶಿಸುವ ಸಾಧ್ಯತೆ ಇದೆ.

ಬಾಲಿವುಡ್ ನ ಪ್ರತಿಭಾವಂತ ನಟ ರಾಜ್ ಕುಮಾರ್ ರಾವ್ ಹಾಗೂ ಪತ್ರಲೇಖಾ ಡೇಟಿಂಗ್ ಮಾಡ್ತಿದ್ದಾರೆ. ಇತ್ತೀಚೆಗಷ್ಟೆ ಇಬ್ಬರೂ ಹಾಲಿಡೇಗೂ ಹೋಗಿ ಬಂದಿದ್ರು. ಇಬ್ಬರೂ ತಮ್ಮ ರಿಲೇಶನ್ಷಿಪ್ ಅನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ವರ್ಷ ಮದುವೆಯ ಬಿಗ್ ನ್ಯೂಸ್ ಕೊಡಬಹದು.

ಕರಿಷ್ಮಾ ಕಪೂರ್ ಹಾಗೂ ಸಂದೀಪ್ ತೋಶ್ನಿವಾಲ ನಡುವಣ ರಿಲೇಶನ್ಷಿಪ್ ಸೀಕ್ರೆಟ್ ಆಗಿ ಉಳಿದಿಲ್ಲ. ಕೆಲ ದಿನಗಳ ಹಿಂದಷ್ಟೆ ಸಂದೀಪ್ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ರು. ಇದೇ ಖುಷಿಯಲ್ಲಿ ಕರಿಷ್ಮಾ ಜೊತೆಗೆ ಪಾರ್ಟಿ ಮಾಡಿದ್ರು. ಕರಿಷ್ಮಾ ಪಾಲ್ಗೊಂಡ ಎಲ್ಲಾ ಫಂಕ್ಷನ್ ಗಳಲ್ಲೂ ಸಂದೀಪ್ ಹಾಜರಿರ್ತಾರೆ. ಇದನ್ನೆಲ್ಲ ನೋಡಿದ್ರೆ ಕರಿಷ್ಮಾ-ಸಂದೀಪ್ ಕೂಡ ಸದ್ಯದಲ್ಲೇ ಮದುವೆಯಾಗಬಹುದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...