alex Certify
ಕನ್ನಡ ದುನಿಯಾ       Mobile App
       

Kannada Duniya

17ನೇ ವರ್ಷಕ್ಕೆ ಅವಳಿ ಮಕ್ಕಳ ತಾಯಿಯಾದ ಈಕೆ ಹೀಗೆ ಆಚರಿಸಿದ್ಲು 23ನೇ ಹುಟ್ಟುಹಬ್ಬ

ಟಿವಿ ನಟಿ ಊರ್ವಶಿ ದೋಲಾಕಿಯಾ ‘ಕಸೋಟಿ ಜಿಂದಗಿ ಕೀ’ ಧಾರಾವಾಹಿಯಲ್ಲಿ ಕೋಮಲಿಕಾ ಪಾತ್ರ ಮಾಡಿ ಮಿಂಚಿದ್ದಳು. ನಟಿ ಕೆಲ ದಿನಗಳ ಹಿಂದಷ್ಟೇ ತನ್ನ ಅವಳಿ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾಳೆ. ಮಕ್ಕಳ ಬಾಲ್ಯದ ಫೋಟೋಗಳ ವಿಡಿಯೋ ತಯಾರಿಸಿ ಮಕ್ಕಳಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾಳೆ.

ಟಿವಿ ನಟಿ ಊರ್ವಶಿ, ಜೀವನದಲ್ಲಿ ಸಾಕಷ್ಟು ಏರುಪೇರು ಕಂಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ಊರ್ವಶಿಗೆ ಮದುವೆಯಾಗಿತ್ತು. ಮದುವೆಯಾದಾಗ ಊರ್ವಶಿ ವಯಸ್ಸು 16. ಮದುವೆಯೊಂದೇ ಅಲ್ಲ ಚಿಕ್ಕ ವಯಸ್ಸಿನಲ್ಲಿ ಅಂದ್ರೆ 17 ವರ್ಷಕ್ಕೆ ಸಾಗರ್ ಹಾಗೂ ಕ್ಷಿತಿಜಾ ಎಂಬ ಅವಳಿ ಮಕ್ಕಳಿಗೆ ಊರ್ವಶಿ ತಾಯಿಯಾದ್ಲು.

ಮದುವೆಯಾಗಿ ಮಕ್ಕಳಾದ ಎರಡೇ ವರ್ಷಕ್ಕೆ ಊರ್ವಶಿ ವಿಚ್ಛೇದನ ಪಡೆದಿದ್ದಾಳೆಂಬ ಸುದ್ದಿಯಿದೆ. ಅವಳಿ ಮಕ್ಕಳನ್ನು ಬೆಳೆಸುವ ದೊಡ್ಡ ಜವಾಬ್ದಾರಿ ಹೊತ್ತ ಊರ್ವಶಿ ಕುಟುಂಬದ ಜೊತೆ ಖುಷಿ ಖುಷಿಯಾಗಿ ಮಕ್ಕಳ 23ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾಳೆ. ನಿಮ್ಮಿಂದಲೇ ನಾನು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಿ ಊರ್ವಶಿ ಫೋಟೋ ಪೋಸ್ಟ್ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...