alex Certify
ಕನ್ನಡ ದುನಿಯಾ       Mobile App
       

Kannada Duniya

ಉಪೇಂದ್ರ ಹೊಸ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ

ರಿಯಲ್ ಸ್ಟಾರ್ ಉಪೇಂದ್ರ ಹೊಸ ಚಿಂತನೆಯೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರಾದರೂ, ಕಾರಣಾಂತರದಿಂದ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ.

ಆರ್. ಚಂದ್ರು ನಿರ್ದೇಶನದ ಚಿತ್ರದಲ್ಲಿ ನಟಿಸಲು ಉಪೇಂದ್ರ ಒಪ್ಪಿದ್ದು, ಮುಂದಿನ ತಿಂಗಳು ಚಿತ್ರ ಸೆಟ್ಟೇರಲಿದೆ. ಹಿಂದೆ ಆರ್. ಚಂದ್ರು ನಿರ್ದೇಶನದ ‘ಬ್ರಹ್ಮ’ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಇದಾದ ಬಳಿಕ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಮೂಡಿ ಬರುತ್ತಿದೆ. ‘ಐ ಲವ್ ಯೂ’ ಹೆಸರಿನ ಚಿತ್ರಕ್ಕೆ ನನ್ನೇ ಪ್ರೀತ್ಸೇ ಎಂದು ಟ್ಯಾಗ್ ಲೈನ್ ಇದೆ. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಲಿದೆ.

ಈಗಾಗಲೇ ಉಪೇಂದ್ರ ‘ಹೋಮ್ ಮಿನಿಸ್ಟರ್’, ‘ಉಪ್ಪಿ–ರುಪ್ಪಿ’ ಚಿತ್ರಗಳನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದಾರೆ. ಸದ್ಯಕ್ಕೆ ಸಕ್ರಿಯ ರಾಜಕೀಯದಿಂದ ದೂರ ಉಳಿದು ಚಿತ್ರಗಳತ್ತ ಗಮನ ಹರಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...