alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ ಚುನಾವಣೆಯಲ್ಲಿ ಉಪೇಂದ್ರ ಕಣಕ್ಕೆ

upi-d

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ. ಅವರ ರಾಜಕೀಯ ಎಂಟ್ರಿಯ ಕುರಿತಾಗಿ ವ್ಯಾಪಕ ಚರ್ಚೆಯಾಗುತ್ತಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಉಪೇಂದ್ರ ಘೋಷಿಸಿದ್ದಾರೆ. ಆದರೆ, ಯಾವ ಕ್ಷೇತ್ರ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ನನಗೆ ಬೇಕಿರುವುದು ರಾಜಕಾರಣಿಗಳಲ್ಲ, ಜನಸೇವಕರಲ್ಲ, ಕಾರ್ಮಿಕರು. ಖಾಕಿ ತೊಟ್ಟ ಕಾರ್ಮಿಕರು ನನ್ನೊಂದಿಗೆ ಕೈ ಜೋಡಿಸುತ್ತಾರೆ ಎಂಬುದು ಅವರ ಆಶಯವಾಗಿದೆ.

ಮತ್ತೊಂದು ಸಂಗತಿ ಎಂದರೆ, ಉಪೇಂದ್ರ ಫುಲ್ ಟೈಮ್ ರಾಜಕಾರಣಿಯಾಗಲಿದ್ದಾರೆ. ಹೊಸ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಲಿದ್ದಾರೆ.

ಒಂದೇ ಸಲಕ್ಕೆ ಎಲ್ಲವೂ ಬದಲಾಗುತ್ತೆ ಎಂದಲ್ಲ, ಬದಲಾವಣೆಯ ಹಾದಿಯಲ್ಲಿ ಜನ ಜೊತೆಯಾಗ್ತಾರೆ ಎನ್ನುವ ವಿಶ್ವಾಸವಿದೆ. ನಾನು ಹೊಸ ಆಶಯದೊಂದಿಗೆ ರಾಜಕಾರಣಕ್ಕೆ ಪ್ರವೇಶಿಸಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...