alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸೀನ್ ಗಳನ್ನು ನೀವೆಂದೂ ಮರೆಯಲಾರಿರಿ….

ನಮಗಿಷ್ಟವಾದ ಕೆಲವೊಂದು ಸಿನಿಮಾಗಳು, ಚಿತ್ರದ ಕೆಲ ಸನ್ನಿವೇಶಗಳು ಬಹುಕಾಲ ನೆನಪಿನಲ್ಲಿರುತ್ತದೆ. ಹೃದಯಕ್ಕೆ ಹತ್ತಿರವಾದ  ನಟನೆ ಮನಸ್ಸಿನಲ್ಲಿ ಉಳಿದುಬಿಡುತ್ತದೆ.

ಬಹುತೇಕರಿಗೆ ಇಷ್ಟವಾದ ಚಿತ್ರದ ಕೆಲ ಸನ್ನಿವೇಶದ ಸ್ಟಿಲ್ಸ್ ಗಳನ್ನು ನೆನಪು ಮಾಡಿಕೊಳ್ಳೋದಾದ್ರೆ….

ರಾಕ್ ಸ್ಟಾರ್ ಚಿತ್ರದಲ್ಲಿ ನದಾನ್ ಪರಿಂದೆ ಪರ್ಫಾರ್ಮನ್ಸ್ ವೇಳೆ ಹೀರ್ ಕಾಣಿಸಿಕೊಂಡಾಗ….

ದಿಲ್ ಚಾಹ್ತಾ ಹೈ ಚಿತ್ರದಲ್ಲಿ ತೇವಗೊಂಡ ಶಾಲಿನಿ ಕಣ್ಣುಗಳನ್ನು ಆಕಾಶ್ ದಿಟ್ಟಿಸಿದ ದೃಶ್ಯ.

ಜಬ್ ವಿ ಮೆಟ್ ಚಿತ್ರದಲ್ಲಿ ಅನ್ಶುಮನ್, ಗೀತ್ ಜೊತೆಗೆ ಮದುವೆಯಾಗಲು ನಿರಾಕರಿಸಿದಾಗ ಗೀತ್ ಮುಖಭಾವ.

‘ಯೆ ಜವಾನಿ ಹೇ ದಿವಾನಿ’ ಚಿತ್ರದಲ್ಲಿ ಬನ್ನಿ ಎದುರು ನೈನಾ ಪ್ರೇಮ ನಿವೇದನೆ ಮಾಡಿಕೊಳ್ಳುವ ದೃಶ್ಯ.

‘ತಮಾಶಾ’ ಚಿತ್ರದಲ್ಲಿ ಭಾವಪರವಶಳಾದ ತಾರಾ, ವೇದ್ ಅನ್ನು ತಬ್ಬಿ ಅಳುವ ಸಂದರ್ಭ.

‘ಮಸಾನ್’ ಚಿತ್ರದಲ್ಲಿ ಶಾಲು ತೀರಿಕೊಂಡಾಗ ದೀಪಕ್ ಕಣ್ಣೀರಾಗಿದ್ದು.

‘ಕುಚ್ ಕುಚ್ ಹೋತಾ ಹೈ’ ಚಿತ್ರದಲ್ಲಿ ಅಂಜಲಿ ತಾನು ಪ್ರೀತಿಸಿದ್ದ ರಾಹುಲ್ ಬಿಟ್ಟು ಟ್ರೈನ್ ನಲ್ಲಿ ಹೊರಡುವ ದೃಶ್ಯ.

ಸದ್ಮಾ ಚಿತ್ರದಲ್ಲಿ ರೇಶ್ಮಿ ಗೆ ಸೋಮು ತಾನ್ಯಾರೆಂದು ಹೇಳಲು ಯತ್ನಿಸುವ ಸಂದರ್ಭ.

‘ಹೈವೇ’ ಚಿತ್ರದಲ್ಲಿ ವೀರಾ ನೋಡಿ ಮಹಾಬೀರ್ ಮುಗ್ಧ ನಗು ನಕ್ಕಿದ್ದು.

‘ಲುಟೇರಾ’ ಚಿತ್ರದಲ್ಲಿ ಪಾಕಿ ಸಾಯೋವಾಗ ವರುಣ್ ನಟನೆ.

‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ಆಯಾನ್ ಪ್ರೇಮ ನಿವೇದನೆ ಬಳಿಕ ಅಲಿಜೇ ನಯವಾಗಿ ನಿರಾಕರಿಸಿದ್ದು.

‘ಸ್ವದೇಶ್’ ಚಿತ್ರದಲ್ಲಿ ಮಗುವೊಂದು ನೀರಿನ ಬಾಟಲಿ ಮಾರುತ್ತಿರುವ ದೃಶ್ಯ ಕಂಡಾಗ ಮೋಹನ್ ಗೆ ಮನವರಿಕೆಯಾದದ್ದು, ಭಾರತದಲ್ಲೆಷ್ಟು ಬಡತನವಿದೆ ಎಂದು.

‘ಲಕ್ ಬೈ ಚಾನ್ಸ್’ ಚಿತ್ರದಲ್ಲಿ ಸೋನಾ ಫ್ರಿಡ್ಜ್ ಬಾಗಿಲು ತೆಗೆದು ಅದರ ಮುಂದೆ ಕುಳಿತಿದ್ದು.

‘ಭಜರಂಗಿ ಭಾಯಿಜಾನ್’ ಚಿತ್ರದಲ್ಲಿ ಭಜರಂಗಿ ವಾಪಸ್ ಹೋಗುತ್ತಿರುವುದನ್ನು ಕಂಡ ಮುನ್ನಿ, ಮಾಮಾ ಎಂದು ಕರೆದದ್ದು.

‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ಭಾರತದ ಹಾಕಿ ತಂಡ ಗೆದ್ದಾಗ ಕಬೀರ್ ಖಾನ್ ಕಣ್ಣಿನಲ್ಲಿದ್ದ ಆನಂದ ಭಾಷ್ಪ. ಇವು ಕೇವಲ ಉದಾಹರಣೆಗಳಷ್ಟೇ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...