alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ! ‘ಉಡ್ತಾ ಪಂಜಾಬ್’ ಫಸ್ಟ್ ಡೇ ಕಲೆಕ್ಷನ್ ಎಷ್ಟಿದೆ ಗೊತ್ತಾ..?

udta-punjab j 19

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ‘ಉಡ್ತಾ ಪಂಜಾಬ್’ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ. ‘ಉಡ್ತಾ ಪಂಜಾಬ್’ನ ಬರೋಬ್ಬರಿ 89 ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕೇಂದ್ರೀಯ ಸೆನ್ಸಾರ್ ಮಂಡಳಿ ಹೇಳಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

 

89 ದೃಶ್ಯಗಳ ಬದಲಿಗೆ 1 ದೃಶ್ಯಕ್ಕೆ ಮಾತ್ರ ಕತ್ತರಿ ಹಾಕುವಂತೆ ಕೋರ್ಟ್ ಸೂಚನೆ ನೀಡಿದ ನಂತರ, ಕಳೆದ ಶುಕ್ರವಾರ ಸಿನಿಮಾ ರಿಲೀಸ್ ಆಗಿದೆ. ಆದರೆ, ಬಿಡುಗಡೆಗೂ ಮೊದಲೇ ‘ಉಡ್ತಾ ಪಂಜಾಬ್’ ಆನ್ ಲೈನ್ ನಲ್ಲಿ ಲೀಕ್ ಆಗಿತ್ತು. ಮೊದಲೇ ಸೆನ್ಸಾರ್, ಕೋರ್ಟ್ ಎಂದೆಲ್ಲಾ ಹೈರಾಣಾಗಿದ್ದ ಚಿತ್ರತಂಡಕ್ಕೆ ಬಿಡುಗಡೆಗೂ ಮೊದಲೇ ಸಿನಿಮಾ ಬಹಿರಂಗವಾಗಿದ್ದು, ಆಘಾತ ಮೂಡಿಸಿತ್ತು. ಆದರೂ, ಹಿಂದೆ ಸರಿಯದ ಚಿತ್ರತಂಡ ನಿಗದಿಯಂತೆಯೇ ಶುಕ್ರವಾರ ರಿಲೀಸ್ ಮಾಡಿದೆ.

 

‘ಉಡ್ತಾ ಪಂಜಾಬ್’ ಮೊದಲ ದಿನವೇ ದಾಖಲೆಯ 10.05 ಕೋಟಿ ರೂ. ಗಳಿಸಿದೆ. ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಉಡ್ತಾ ಪಂಜಾಬ್’, ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ವೀಕೆಂಡ್ ಆಗಿರುವುದರಿಂದ ಜನ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಮೊದಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲವಾದರೂ, ನಂತರ ಜನರನ್ನು ಸೆಳೆಯುತ್ತಿದೆ ಎನ್ನಲಾಗಿದೆ. ಶಾಹಿದ್ ಕಪೂರ್, ಆಲಿಯಾ ಭಟ್, ಕರೀನಾ ಕಪೂರ್ ಮೊದಲಾದವರು ನಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...