alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮೊದಲೇ ಬಹಿರಂಗವಾಯ್ತು ‘ಉಡ್ತಾ ಪಂಜಾಬ್’

udta pan

ಬಾಲಿವುಡ್ ಸಿನಿಮಾ ‘ಉಡ್ತಾ ಪಂಜಾಬ್’ ಭಾರೀ ವಿವಾದಗಳಿಂದ ಸುದ್ದಿಯಾಗಿತ್ತು. ಈ ಚಿತ್ರದಲ್ಲಿನ ಬರೋಬ್ಬರಿ 89 ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಕೇಂದ್ರೀಯ ಸೆನ್ಸಾರ್ ಮಂಡಳಿ ಸೂಚನೆ ನೀಡಿದ್ದು, ಇದರ ವಿರುದ್ಧ ಚಿತ್ರ ತಂಡ ಮುಂಬೈ ಹೈಕೋರ್ಟ್ ಮೊರೆ ಹೋಗಿತ್ತು.

 

ಕೋರ್ಟ್ ಕೇವಲ ಒಂದೇ ಒಂದು ದೃಶ್ಯಕ್ಕೆ ಮಾತ್ರ ಕತ್ತರಿ ಹಾಕಲು ಸೂಚನೆ ನೀಡಿದ್ದು, ಅದರಂತೆ ಇದೇ ಜೂನ್ 17 ರಂದು ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿತ್ತು. ಆದರೆ, ಬಿಡುಗಡೆಗೂ ಮೊದಲೇ ‘ಉಡ್ತಾ ಪಂಜಾಬ್’ ಆನ್ ಲೈನ್ ನಲ್ಲಿ ಬಹಿರಂಗವಾಗಿದೆ. ಸೆನ್ಸಾರ್ ಕಾಪಿ ಎಂದು ಲೋಗೋ ಕಾಣಿಸಿಕೊಂಡಿರುವ ಪೂರ್ಣ ಪ್ರಮಾಣದ ಚಿತ್ರ ಆನ್ ಲೈನ್ ನಲ್ಲಿ ಕಾಣಸಿಗುತ್ತಿದ್ದು, ಇದು ಚಿತ್ರತಂಡಕ್ಕೆ ತಲೆ ನೋವಾಗಿದೆ. ಬಿಡುಗಡೆಗೂ ಮೊದಲೇ ಬಹಿರಂಗವಾಗಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

 

ಬಾಲಿವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿದ್ದ ‘ಉಡ್ತಾ ಪಂಜಾಬ್’ ಸಿನಿಮಾದಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಸೆನ್ಸಾರ್ ಮಂಡಳಿ ಹೇಳಿದ್ದು, ಇದು ಭಾರೀ ಪರ, ವಿರೋಧದ ಚರ್ಚೆಗೆ ಕಾರಣವಾಗಿತ್ತು. ಇದೀಗ, ಬಿಡುಗಡೆಗೂ ಮೊದಲೇ ಸಿನಿಮಾ ಬಹಿರಂಗವಾಗಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...