alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಗೆ ಗುಡ್ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳು ಇಂದು ಮನೆಯಲ್ಲೇ ಕುಳಿತು ನೆಚ್ಚಿನ ನಟನ ಸಿನಿಮಾ ವೀಕ್ಷಿಸಬಹುದಾಗಿದೆ.

ದರ್ಶನ್, ದೀಪಾ ಸನ್ನಿಧಿ, ದಿನಕರ್, ಶರತ್ ಲೋಹಿತಾಶ್ವ, ಸೃಜನ್ ಲೋಕೇಶ್ ಸೇರಿದಂತೆ ಬಹು ತಾರಾಗಣವಿರುವ ಯಶಸ್ವಿ ಚಿತ್ರ ‘ಚಕ್ರವರ್ತಿ’ಯನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಮನೆಯಲ್ಲೇ ನೋಡಬಹುದಾಗಿದೆ.

ಜನವರಿ 14 ರ ಇಂದು ಸಂಜೆ 6 ಗಂಟೆಗೆ ಉದಯ ಟಿ.ವಿ.ಯಲ್ಲಿ ‘ಚಕ್ರವರ್ತಿ’ ಪ್ರಸಾರವಾಗಲಿದೆ. 80 ರ ದಶಕದ ಕಥಾ ಹಂದರವಿರುವ ‘ಚಕ್ರವರ್ತಿ’ಯಲ್ಲಿ ದರ್ಶನ್ ವಿವಿಧ ಗೆಟಪ್ ಗಳಲ್ಲಿ, ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿಂತನ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...