alex Certify
ಕನ್ನಡ ದುನಿಯಾ       Mobile App
       

Kannada Duniya

ಮಗು ಜನಿಸಿದ 2 ವರ್ಷಗಳ ಬಳಿಕ ವಿವಾಹವಾದ ನಟ

ಮಗು ಜನಿಸಿದ 2 ವರ್ಷಗಳ ಬಳಿಕ ಬಾಲಿವುಡ್ ನಟರೊಬ್ಬರು ತಮ್ಮ ಬ್ರಿಟಿಷ್ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಸಂಬಂಧಿಕರು ಹಾಗೂ ಅತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಈ ವಿವಾಹ ನೆರವೇರಿದ್ದು, ನವ ದಂಪತಿಗಳ 2 ವರ್ಷದ ಮಗು ಸಹ ವಿವಾಹಕ್ಕೆ ಸಾಕ್ಷಿಯಾಗಿದೆ.

ನಟ ಪೂರಬ್ ಕೊಹ್ಲಿ ತಮ್ಮ ಬಹುಕಾಲದ ಗೆಳತಿ, ಬ್ರಿಟನ್ ಸಂಜಾತೆ ಲೂಸಿ ಪ್ಯಾಟನ್ ಜೊತೆ ಗೋವಾದ ರೆಸಾರ್ಟ್ ಒಂದರಲ್ಲಿ ವಿವಾಹವಾಗಿದ್ದು, ಎರಡು ವರ್ಷಗಳ ಹಿಂದೆಯೇ ಇವರಿಬ್ಬರಿಗೆ ಹೆಣ್ಣು ಮಗುವೊಂದು ಜನಿಸಿತ್ತು.

ವಿವಾಹದ ಕುರಿತು ದಿಢೀರ್ ನಿರ್ಧಾರ ಕೈಗೊಂಡ ಇವರಿಬ್ಬರು ಕೆಲ ದಿನಗಳ ಹಿಂದಷ್ಟೇ ಗೋವಾದಲ್ಲಿ ಸತಿ-ಪತಿಗಳಾಗಿದ್ದಾರೆ. ಈ ವಿವಾಹದಲ್ಲಿ ಬಾಲಿವುಡ್ ನ ಹಲವು ನಟ-ನಟಿಯರು ಪಾಲ್ಗೊಂಡಿದ್ದು, ನಟಿ ಅಮೃತಾ ಪುರಿ ವಿವಾಹದ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...