alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷಗಳ ಬಳಿಕ ಸಿಕ್ಕಿಬಿದ್ರು ನಟಿ ಮನೆ ದೋಚಿದ್ದ ಕಳ್ಳರು

“ಮೈನೆ ಪ್ಯಾರ್ ಕಿಯಾ” ಖ್ಯಾತಿಯ ನಟಿ ಭಾಗ್ಯಶ್ರೀಯವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು 4 ವರ್ಷಗಳ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಪಿಂಟೂ ಹೃದಯರಾಮ್ ನಿಶಾದ್ ಹಾಗೂ ತ್ರಿವೇಣಿ ಅಲಿಯಾಸ್ ಮಹೇಶ್ ಬೂನಿಲಾಲ್ ನಿಶಾದ್ ಬಂಧಿತ ಆರೋಪಿಗಳಾಗಿದ್ದು, ನಟಿಯ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಇವರುಗಳು ಜನವರಿ 24, 2014 ರಂದು ಭಾಗ್ಯಶ್ರೀಯವರ ಮುಂಬೈನ ಪ್ರತಿಷ್ಟಿತ ವಿಲೇಪಾರ್ಲೆಯಲ್ಲಿರುವ ಮನೆಯಿಂದ 26 ಲಕ್ಷ ರೂ. ಬೆಲೆಯ ನಗದನ್ನು ದೋಚಿದ್ದಲ್ಲದೆ, ಮನೆಯಲ್ಲಿದ್ದ ಭಾಗ್ಯಶ್ರೀಯವರ ಅತ್ತೆ, ಮಾವನವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಇಷ್ಟು ವರ್ಷಗಳಾದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಇತ್ತೀಚೆಗೆ ಥಾಣೆಯಲ್ಲಿ ನಡೆದ ಕಳ್ಳತನ ಪ್ರಕರಣವೊಂದರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಈ ಹಿಂದೆ ನಟಿ ಭಾಗ್ಯಶ್ರೀ ಮನೆಯಲ್ಲಿಯೂ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲು ಮುಂಬೈನ ಜುಹು ಪೊಲೀಸರು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...