alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಹವಾ ಎಬ್ಬಿಸಿದೆ ‘ಪರಿ’ ಫಸ್ಟ್ ಲುಕ್

anushka-sharma-pari_650x400_71497341335

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫುಲ್ ಬ್ಯುಸಿಯಾಗಿದ್ದಾರೆ. ಅನುಷ್ಕಾಗೆ ಕೈತುಂಬಾ ಅವಕಾಶಗಳು ಜೊತೆಗೆ ಯಶಸ್ಸು ಕೂಡ ಸಿಗುತ್ತಿದೆ. ಸದ್ಯದಲ್ಲೇ ‘ಪರಿ’ ಎಂಬ ಹೊಸ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳಲಿದ್ದಾಳೆ. ‘ಪರಿ’ ಚಿತ್ರದ ಫಸ್ಟ್ ಲುಕ್ ಅನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

‘ಪರಿ’ ಚಿತ್ರಕ್ಕೆ ಅನುಷ್ಕಾ ಶರ್ಮಾ ಕೂಡ ಸಹ ನಿರ್ಮಾಪಕಿ. ಅನುಷ್ಕಾ ಜೊತೆಗೆ ಪರಂಬ್ರತ ಚಟರ್ಜಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ನೀಲಿ ಕಣ್ಣುಗಳು, ಕೆದರಿದ ಕೂದಲು, ನಿಗೂಢ ಮುಖಭಾವ ‘ಪರಿ’ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಅನುಷ್ಕಾಳ ಈ ಅವತಾರವನ್ನು ಆನ್ ಲೈನ್ ನಲ್ಲಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಪ್ರೊಸಿತ್ ರಾಯ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಸದ್ಯ ಶಾರುಖ್ ಖಾನ್ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದಲ್ಲೂ ಅನುಷ್ಕಾ ಶರ್ಮಾ ನಾಯಕಿಯಾಗಿ ಅಭಿನಯಿಸುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...