alex Certify
ಕನ್ನಡ ದುನಿಯಾ       Mobile App
       

Kannada Duniya

‘ಬೇಫಿಕ್ರೆ’ ಸಿನಿಮಾ ನೋಡ ಹೊರಟ ಟ್ವಿಂಕಲ್ ಗೆ ಪೀಕಲಾಟ..!

twinkle-khanna_1475574849

ಪ್ರತಿ ಥಿಯೇಟರ್ ನಲ್ಲೂ ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವುದು ಕಡ್ಡಾಯ ಅಂತಾ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದ್ರೆ ಕೆಲವು ಕಡೆಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸ್ತಾ ಇಲ್ಲ, ಕಾರಣ ವಯಸ್ಕರ ಸಿನಿಮಾ ವೀಕ್ಷಣೆಗೆ ಬರುವ ಪ್ರೇಕ್ಷಕರು ರಾಷ್ಟ್ರಗೀತೆ ಹಾಕಿದಾಗ ಎದ್ದುನಿಲ್ಲಲು ನಿರಾಕರಿಸ್ತಿದ್ದಾರೆ.

ರಣವೀರ್ ಸಿಂಗ್ ಹಾಗೂ ವಾಣಿ ಕಪೂರ್ ಅಭಿನಯದ ‘ಬೇಫಿಕ್ರೆ’ ಚಿತ್ರ ನೋಡಲು ಹೋಗ್ತಾ ಇರೋ ನಟಿ ಟ್ವಿಂಕಲ್ ಖನ್ನಾಗೆ ಈಗ ಉಭಯ ಸಂಕಟ. ಬೇಫಿಕ್ರೆ ಚಿತ್ರದಲ್ಲಿ ರಣವೀರ್-ವಾಣಿ ಇಬ್ಬರೂ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳು, ಕಿಸ್ಸಿಂಗ್ ಸೀನ್ ಗಳಿಗೇನೂ ಬರವಿಲ್ಲ. ಬಿಗಿಯಾದ ಕೆಂಪು ಚಡ್ಡಿಯಲ್ಲಿ ರಣವೀರ್ ಸಿಂಗ್ ರನ್ನು ನೋಡ್ತಾ ದೇಶಭಕ್ತಿ ಎಲ್ಲಿಂದ ಬರಲು ಸಾಧ್ಯ ಅನ್ನೋದು ಟ್ವಿಂಕಲ್ ಖನ್ನಾರ ಪ್ರಶ್ನೆ.

ಹಾಗಂತ ಅವರಿಗೆ ದೇಶಪ್ರೇಮ ಇಲ್ಲವೆಂದೇನೂ ಅಲ್ಲ. ರಾಷ್ಟ್ರಗೀತೆ ಹಾಡುವಾಗ ಅರಿವಿಲ್ಲದಂತೆಯೇ ಅವರ ಕಣ್ಣಂಚು ಒದ್ದೆಯಾಗುತ್ತಂತೆ, ಒಮ್ಮೆ ವಾಘಾ ಗಡಿಗೂ ಹೋಗಿದ್ದ ಟ್ವಿಂಕಲ್ ಖನ್ನಾ, ಪಾಕಿಸ್ತಾನೀಯರ ಘೋಷಣೆಗೆ ಸಮನಾಗಿ ‘ಜೈಹಿಂದ್’ ಹಾಗೂ ‘ಭಾರತ್ ಮಾತಾಕೀ ಜೈ’ ಅಂತಾ ಉದ್ಘರಿಸಿದ್ರು. ಅದೇನೇ ಆದ್ರೂ ದೇಶಭಕ್ತಿಗೆ ಪ್ರಮಾಣದ ಮೂಲಕ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ ಅನ್ನೋದು ಅವರ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...