alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಶಾರ್ಟ್ಸ್ ಧರಿಸಿ ಯಡವಟ್ಟು ಮಾಡಿಕೊಂಡ್ಲು ನಟಿ

ಕಿರುತೆರೆಯ ನಟಿ ಸಾರಾ ಇತ್ತೀಚೆಗೆ ಪಾಕಿಸ್ತಾನಕ್ಕೆ ಹೋಗಿದ್ಲು. ಪಾಕಿಸ್ತಾನದ ಟಿವಿ ಶೋವೊಂದರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗಿದ್ದ ಸಾರಾಗೆ ವಿಚಿತ್ರ ಅನುಭವವಾಗಿದೆ.

ಸಾರಾ ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾಳೆ. ಸಾರಾ ಶೋ ಮುಗಿಸಿ ಹೊಟೇಲ್ ಗೆ ಬರ್ತಿದ್ದಂತೆ ಅಲ್ಲಿದ್ದ ಜನರೆಲ್ಲ ಆಕೆಯನ್ನು ಆಶ್ಚರ್ಯದಿಂದ ನೋಡಿದ್ರಂತೆ. ಇದಕ್ಕೆ ಕಾರಣವಾಗಿದ್ದು ಸಾರಾ ಡ್ರೆಸ್. ಶಾರ್ಟ್ಸ್ ಧರಿಸಿದ್ದ ಸಾರಾಳನ್ನು ಅಲ್ಲಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರಂತೆ.

ಈ ವೇಳೆ ಅಲ್ಲಿಗೆ ಬಂದ ಯುನಿಟ್ ಸದಸ್ಯರೊಬ್ಬರು ಹೊರಗೆ ಶಾರ್ಟ್ಸ್ ಧರಿಸುವಂತಿಲ್ಲ ಎಂದ್ರಂತೆ. ತಕ್ಷಣ ರೂಮಿಗೆ ಹೋದ ಸಾರಾ ಡ್ರೆಸ್ ಬದಲಾಯಿಸಿ ಬಂದಳಂತೆ. ಮುಂಬೈನಲ್ಲಿ ನಾವು ಯಾವ ಡ್ರೆಸ್ ಧರಿಸಿದ್ರೂ ಯಾರೂ ಪ್ರಶ್ನೆ ಮಾಡುವುದಿಲ್ಲ. ಆದ್ರೆ ಪಾಕಿಸ್ತಾನದಲ್ಲಿ ಹಾಗಲ್ಲ ಎಂದಿದ್ದಾಳೆ ಸಾರಾ.

ಸಾರಾ ಈ ಹಿಂದೆಯೂ ಒಂದು ಶೋನಲ್ಲಿ ಪಾಲ್ಗೊಂಡಿದ್ದಳು. ಸಂಬಂಧದಲ್ಲಿ ಸಹೋದರನಾಗುವ ಯುವಕನ ಜೊತೆ ನಡೆಯುವ ಪ್ರೇಮ ಕಥೆ ಅದಾಗಿತ್ತು. ತನ್ನ ಶೋಗೆ ಪಾಕಿಸ್ತಾನದಲ್ಲಿ ತುಂಬಾ ಪ್ರೀತಿ ಸಿಕ್ಕಿದೆ ಎಂದು ಸಾರಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...