alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳ ವಿರುದ್ಧ ಧ್ವನಿ ಎತ್ತಿದ ನಟಿ

divyanka_1502883923_618x347

ಹಿಂದಿ ಧಾರಾವಾಹಿ ನೋಡುವ ಎಲ್ಲ ಪ್ರೇಕ್ಷಕರಿಗೂ ನಟಿ ದಿವ್ಯಾಂಕ ತ್ರಿಪಾಠಿ ಬಗ್ಗೆ ತಿಳಿದಿರುತ್ತೆ. ಸ್ಟಾರ್ ಪ್ಲಸ್ ಧಾರಾವಾಹಿಯಲ್ಲಿ ನಟಿಸುತ್ತಿರುವ ದಿವ್ಯಾಂಕ ಚಂಡೀಗಢದಲ್ಲಿ 12 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದ ವಿಚಲಿತಳಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಮುಂದಾಗಿರುವ ದಿವ್ಯಾಂಕ, ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿನಂತಿ ಮಾಡಿದ್ದಾಳೆ.

ಬೇಟಿ ಬಚಾವೊ ಬದಲು ಬೇಟಿಯೋಂಕೋ ಬಚಾವೊ ಎಂದು ದಿವ್ಯಾಂಕ ಟ್ವಿಟ್ ಮಾಡಿದ್ದಾಳೆ. ಪ್ರಧಾನ ಮಂತ್ರಿಯವರಿಗೆ ಸ್ವಚ್ಛ ಭಾರತ ಅಭಿಯಾನದ ಬದಲು ಬಲತ್ಕಾರದ ಕೊಳಕನ್ನು ಹೊರಗೆ ಹಾಕಿ ಎಂದಿದ್ದಾಳೆ. ಈ ಘಟನೆ ನಂತ್ರ ಕಂಗಾಲಾಗಿರುವ ದಿವ್ಯಾಂಕ ನಾನು ಹೆಣ್ಣು ಮಗುವಿಗೆ ಜನ್ಮ ನೀಡಲು ಇಷ್ಟಪಡುವುದಿಲ್ಲ ಎಂದಿದ್ದಾಳೆ.

ಎಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ದಿನದಂದೇ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಯರು ಯಾವುದೇ ಪಕ್ಷಕ್ಕೆ ಮತ ಚಲಾಯಿಸಬಾರದು ಎಂದು ದಿವ್ಯಾಂಕ ಟ್ವೀಟರ್ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...