alex Certify
ಕನ್ನಡ ದುನಿಯಾ       Mobile App
       

Kannada Duniya

ನಟನ ವಿರುದ್ಧ ದಾಖಲಾಯ್ತು ದೂರು, ಯಾಕೆ ಗೊತ್ತಾ…?

ತೆಲುಗು ಧಾರವಾಹಿಯ ನಟ ಬಾಲಾಜಿ ವಿರುದ್ಧ ಹೈದ್ರಾಬಾದ್ ನ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 17 ಲಕ್ಷ ಹಣ ಕೊಡದೆ ವಂಚಿಸಿದ ಹಿನ್ನೆಲೆಯಲ್ಲಿ ನಟನ ವಿರುದ್ಧ ಜೂನಿಯರ್ ನಟಿ ಭಾಗ್ಯಲಕ್ಷ್ಮಿ ದೂರು ದಾಖಲಿಸಿದ್ದಾರೆ.

2016 ರಲ್ಲಿ ಬಾಲಾಜಿ ಪತ್ನಿ ಕೃಷ್ಣವೇಣಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಈ ದಂಪತಿ ಕಿಡ್ನಿ ದಾನಿಗಳನ್ನ ಹುಡುಕುತ್ತಿದ್ದರು. ಈ ವೇಳೆ ನಟಿ ಲಕ್ಷ್ಮಿಗೆ ಕಿಡ್ನಿ ನೀಡಿದರೆ 20 ಲಕ್ಷ ನೀಡುವುದಾಗಿ ಬಾಲಾಜಿ ತಿಳಿಸಿದ್ದಾರೆ.

20 ಲಕ್ಷ ಸಿಗುತ್ತದೆ ಎಂಬ ಆಸೆಗೆ ನಟಿ ಲಕ್ಷ್ಮಿ ಕಿಡ್ನಿ ನೀಡುವುದಾಗಿ ತಿಳಿಸಿದ್ಧಾರೆ. ಅಂತೆಯೇ ಬಾಲಾಜಿ ಆಕೆಗೆ 3 ಲಕ್ಷ ಅಡ್ವಾನ್ಸ್ ನೀಡಿ, ಉಳಿದ 17 ಲಕ್ಷವನ್ನು ಕಿಡ್ನಿ ನೀಡಿದ ಬಳಿಕ ನೀಡುವುದಾಗಿ ತಿಳಿಸಿದ್ರು. 2017 ರಲ್ಲಿ ಲಕ್ಷ್ಮಿ, ಕೃಷ್ಣವೇಣಿಗೆ ಕಿಡ್ನಿ ದಾನ ಮಾಡಿದ್ರು.

ಕಿಡ್ನಿ ಸಿಕ್ಕ ಮೇಲೆ ಬಾಲಾಜಿ ಇದೂವರೆಗೂ ಲಕ್ಷ್ಮಿಗೆ 17 ಲಕ್ಷ ಹಣ ನೀಡಿಲ್ಲ. ತನ್ನ ಮಗಳ ಹೃದಯ ಚಿಕಿತ್ಸೆಗೆ ಅಂತಾ ನಾನು ಕಿಡ್ನಿ ಕೊಟ್ಟಿದ್ದೆ. ಆದ್ರೆ ಬಾಲಾಜಿ ಪೂರ್ಣ ಹಣ ಕೊಡ್ತಿಲ್ಲ. ಕೇಳಲು ಹೋದ್ರೆ ಕೆಟ್ಟದಾಗಿ ಮಾತನಾಡ್ತಾರೆ ಅಂತಾ ಲಕ್ಷ್ಮಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...