alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಚಿತ್ರದಲ್ಲಿ ಶಾರುಕ್ ಲುಕ್ ಲೀಕ್

srk1024_1498185561_749x421

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟ್ಯೂಬ್ಲೈಟ್’  ಶುಕ್ರವಾರ ತೆರೆಗೆ ಬಂದಿದೆ. ಚಿತ್ರದಲ್ಲಿ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ನಟಿಸಿದ್ದಾರೆ. ಕರಣ್-ಅರ್ಜುನ್ ನನ್ನು ದೊಡ್ಡ ತೆರೆ ಮೇಲೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಮಧ್ಯೆ ಶಾರುಕ್ ಖಾನ್ ರ ಕೆಲ ಫೋಟೋಗಳು ಲೀಕ್ ಆಗಿವೆ.

ಈ ಫೋಟೋದಲ್ಲಿ ಸಲ್ಮಾನ್ ಹಾಗೂ ಶಾರುಖ್ ಇಬ್ಬರೂ ಇದ್ದಾರೆ. ಚಿತ್ರದಲ್ಲಿ ಶಾರುಕ್ ಜಾದೂಗಾರನ ಪಾತ್ರದಲ್ಲಿ ಮಿಂಚಿದ್ದಾರೆಂದು ಫೋಟೋ ನೋಡಿದ್ರೆ ಗೊತ್ತಾಗುತ್ತೆ. ಮುಖದ ಮೇಲೆ ಟ್ಯಾಟೂ ಹಚ್ಚಿಕೊಂಡಿದ್ದಾರೆ ಶಾರುಕ್. ಟ್ರೈಲರ್ ನಲ್ಲಿ ಶಾರುಕ್ ಸಣ್ಣ ಝಲಕ್ ನಲ್ಲಿ ಕಾಣಿಸಿಕೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಲ್ಮಾನ್ ಚಿತ್ರದಲ್ಲಿ ಶಾರುಕ್ ಎಂಟ್ರಿ ಟರ್ನಿಂಗ್ ಪಾಯಿಂಟ್ ಎಂದಿದ್ದರು.

ಕಬೀರ್ ಚಿತ್ರದ ಕಥೆ ಹೇಳುವ ಜೊತೆಗೆ ಟರ್ನಿಂಗ್ ಪಾಯಿಂಟ್ ಆಗುವ ಈ ಪಾತ್ರಕ್ಕೆ ಶಾರುಕ್ ಸೂಕ್ತ ಎಂದಿದ್ದರಂತೆ. ತಕ್ಷಣ ಸಲ್ಮಾನ್, ಶಾರುಕ್ ಗೆ ಕರೆ ಮಾಡಿದ್ದರಂತೆ. ಸರಿಯಾಗಿ ಕಥೆಯನ್ನೂ ಕೇಳದೆ ಶಾರುಕ್ ನಟಿಸಲು ಒಪ್ಪಿಕೊಂಡಿದ್ದರಂತೆ. ಮಾಹಿತಿ ಪ್ರಕಾರ ವಿಶ್ವದಾದ್ಯಂತ 5550 ಥಿಯೇಟರ್ ನಲ್ಲಿ ಚಿತ್ರ ತೆರೆಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...