alex Certify
ಕನ್ನಡ ದುನಿಯಾ       Mobile App
       

Kannada Duniya

ನಾನು ಕುಡಿಯುತ್ತೇನೆ-ಸಿಗರೇಟ್ ಸೇದುತ್ತೇನೆ ಇಷ್ಟವಾಗದಿದ್ದರೆ ಅನ್ ಫಾಲೋ ಮಾಡಿ ಎಂದ ನಟಿ

ನಟಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಾಕಿದ ಫೋಟೋವೊಂದು ಟ್ರೋಲಿಗರ ಗೇಲಿಗೆ ಗುರಿಯಾಗಿತ್ತು. ಈ ಫೋಟೋದಲ್ಲಿ ನಟಿ ಶ್ವೇತಾ ಸಾಲ್ವೆ, ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದು, ಇದಕ್ಕೆ ಹಲವರು ತರಹೇವಾರಿ ಕಮೆಂಟ್ ಮಾಡಿದ್ದರು.

ಈ ಕಮೆಂಟ್ ಗಳಿಗೆ ಖಡಕ್ ಉತ್ತರ ನೀಡಿರುವ ನಟಿ ಶ್ವೇತಾ ಸಾಲ್ವೆ, ಹೌದು ನಾನು ಮದ್ಯಪಾನ ಹಾಗೂ ಧೂಮಪಾನ ಮಾಡುತ್ತೇನೆ. ಇದರಿಂದ ಕೆಟ್ಟ ತಾಯಿ ಹೇಗಾಗುತ್ತೇನೆ ಎಂದು ಪ್ರಶ್ನಿಸಿದ್ದಾರೆ.

ನನ್ನ ಪೋಷಕರು ನನ್ನನ್ನು ಜವಾಬ್ದಾರಿಯುತವಾಗಿ ಬೆಳೆಸಿದ್ದು, ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ನೀವು ಈ ರೀತಿ ಪ್ರಶ್ನೆ ಮಾಡಬಾರದು ಎಂದು ಹೇಳಿರುವ ಶ್ವೇತ ಸಾಲ್ವೆ, ನನ್ನ ವರ್ತನೆ ನಿಮಗೆ ಇಷ್ಟವಾಗದಿದ್ದರೆ ಅನ್ ಫಾಲೋ ಮಾಡಬಹುದು ಎಂದು ಹೇಳಿದ್ದಾರೆ.

2012 ರಲ್ಲಿ ತಮ್ಮ ಬಹುಕಾಲದ ಗೆಳೆಯ ಅರ್ಮಿತ್ ಸೇಥಿಯವರನ್ನು ವಿವಾಹವಾಗಿರುವ ಶ್ವೇತ ಸಾಲ್ವೆಗೆ 2 ವರ್ಷದ ಪುತ್ರಿಯಿದ್ದು, ಮದ್ಯಪಾನ ಮಾಡುತ್ತಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವೇಳೆ, ನೆಟ್ಟಿಗರು ನೀವು ಒಳ್ಳೆಯ ತಾಯಿಯಲ್ಲ. ನಿಮಗೆ ಈ ರೀತಿ ಮಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಕಮೆಂಟ್ ಮಾಡಿದ್ದರಲ್ಲದೇ, ಇದೇ ಅಭ್ಯಾಸ ನಿಮ್ಮ ಮಕ್ಕಳಿಗೂ ಬರುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಮತ್ತೊಂದು ಫೋಟೋ ಹಾಕಿ ಶ್ವೇತ ಸಾಲ್ವೆ ಖಡಕ್ ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...