alex Certify
ಕನ್ನಡ ದುನಿಯಾ       Mobile App
       

Kannada Duniya

ಅದ್ಧೂರಿ ಮದುವೆಗೆ ಒಲ್ಲೆ ಎಂದ ಸೋನಂ ಕಪೂರ್…!

ಮೇ ತಿಂಗಳಿನಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಮದುವೆ ನೆರವೇರಲಿದೆ ಅನ್ನೋ ಸುದ್ದಿ ಈಗಾಗ್ಲೇ ವೈರಲ್ ಆಗಿದೆ. ಮುಂಬೈನಲ್ಲಿರೋ ಸಂಬಂಧಿಕರ ಬೃಹತ್ ಬಂಗಲೆಯಲ್ಲಿ ಸೋನಂ ತಮ್ಮ ಗೆಳೆಯನನ್ನು ವರಿಸಲಿದ್ದಾರಂತೆ.

ನಂತರ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಅದ್ಧೂರಿ ರಿಸೆಪ್ಷನ್ ಕೂಡ ಆಯೋಜಿಸಲಾಗ್ತಿದೆ. ಅನಿಲ್ ಕಪೂರ್ ಪುತ್ರಿಯ ವಿವಾಹ ಅಂದ್ಮೇಲೆ ವೈಭೋಗಕ್ಕೇನೂ ಕಡಿಮೆ ಇರೋದಿಲ್ಲ ಅನ್ನೋದು ಎಲ್ಲರ ಲೆಕ್ಕಾಚಾರ. ಆದ್ರೆ ಮದುಮಗಳು ಸೋನಂ ಕಪೂರ್ ಹೇಳೋದೇ ಬೇರೆ.

ಡೆಸ್ಟಿನೇಶನ್ ವೆಡ್ಡಿಂಗ್ ನಲ್ಲಿ ಸೋನಂಗೆ ಆಸಕ್ತಿ ಇಲ್ಲ. ಮನೆಯಲ್ಲೇ ಸಂಪ್ರದಾಯಬದ್ಧವಾಗಿ ಮದುವೆ ನೆರವೇರಬೇಕು ಅನ್ನೋದು ಅವಳ ಆಸೆ. ಅಷ್ಟೇ ಅಲ್ಲ ಮದುವೆಗಾಗಿ ಕೋಟಿಗಟ್ಟಲೆ ಖರ್ಚು ಮಾಡೋದು ವ್ಯರ್ಥ ಅಂತಾ ಹೇಳಿದ್ದಾಳೆ.

ಸೋನಂಳ ಮದುವೆ ಡ್ರೆಸ್, ಅತಿಥಿಗಳ ಲಿಸ್ಟ್ ಇವುಗಳ ಬಗ್ಗೆಯೆಲ್ಲ ಮಾಧ್ಯಮಗಳಲ್ಲಿ ತರಹೇವಾರಿ ಸುದ್ದಿಗಳು ಹರಿದಾಡ್ತಾ ಇವೆ. ಅದೆಲ್ಲ ಕೇವಲ ಗಾಸಿಪ್ ಅಂತಾ ಸೋನಂ ಟ್ವೀಟ್ ಸಹ ಮಾಡಿದ್ದಾಳೆ. ಇಷ್ಟೆಲ್ಲ ಊಹಾಪೋಹಗಳ ನಡುವೆ ಸೋನಂ ಮದುವೆ ಯಾವ ರೀತಿ ಇರುತ್ತೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...