alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು

ಪ್ರಿನ್ಸ್ ಮಹೇಶ್ ಬಾಬು ಹಾಗೂ ಎ.ಆರ್. ಮುರುಗದಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಸ್ಪೈಡರ್’ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ‘ಸ್ಪೈಡರ್’ ಬಾಲಿವುಡ್ ನಲ್ಲೂ ನಿರ್ಮಾಣವಾಗಲಿದ್ದು, ಮಹೇಶ್ ಬಾಬು ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಹೇಶ್ ಬಾಬು ಅಭಿನಯದ ಮೊದಲ ಬಾಲಿವುಡ್ ಚಿತ್ರವಾಗಲಿದೆ.

‘ಸ್ಪೈಡರ್’ ಮೂಲಕ ಮಹೇಶ್ ಬಾಬು ಭರ್ಜರಿಯಾಗಿ ಕಂ ಬ್ಯಾಕ್ ಮಾಡಿದ್ದು, ಚಿತ್ರ ಗಳಿಕೆಯಲ್ಲಿಯೂ ಮುಂದಿದೆ. ಚಿತ್ರದ ಯಶಸ್ಸಿನ ಕುರಿತಾಗಿ ಮಾತನಾಡಿದ ಮುರುಗದಾಸ್, ಹಿಂದಿಯಲ್ಲಿಯೂ ‘ಸ್ಪೈಡರ್’ ನಿರ್ಮಾಣಕ್ಕೆ ಪೂರ್ವ ತಯಾರಿ ನಡೆದಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟಿಸಬಹುದೆನ್ನಲಾಗಿತ್ತಾದರೂ, ಅದನ್ನು ಮುರುಗದಾಸ್ ಅಲ್ಲಗಳೆದಿದ್ದಾರೆ. ಮಹೇಶ್ ಬಾಬು ಅವರೇ ಕಾಣಿಸಿಕೊಳ್ಳಬಹುದೆಂದು ಹೇಳಿದ್ದಾರೆ.

ಮಹೇಶ್ ಬಾಬು ಅಭಿನಯದ ‘ಪೋಕಿರಿ’ಯ ಹಿಂದಿ ಅವತರಣಿಕೆಯಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದರು. ‘ಹಾಲಿಡೇ’, ‘ಗಜಿನಿ’ ಮೂಲಕ ಬಾಲಿವುಡ್ ನಲ್ಲಿ ಯಶಸ್ವಿಯಾಗಿರುವ ಮುರುಗದಾಸ್ ‘ಸ್ಪೈಡರ್’ ಚಿತ್ರದ ಮೂಲಕ ಮತ್ತೆ ಮಿಂಚಲು ರೆಡಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...