alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಲ್ಮ್ ಚೇಂಬರ್ ಮುಂದೆ ನಟಿಯ ಅರೆಬೆತ್ತಲೆ ಪ್ರತಿಭಟನೆ

ತೆಲುಗು ಚಿತ್ರರಂಗ ತಬ್ಬಿಬ್ಬಾಗುವಂತಹ ಘಟನೆ ನಡೆದಿದೆ. ತೆಲುಗು ಫಿಲ್ಮ್ ಛೇಂಬರ್ ಮುಂದೆ ನಟಿ ಶ್ರೀರೆಡ್ಡಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾಳೆ. ತೆಲುಗು ಚಿತ್ರರಂಗದಲ್ಲಿ ಅವಕಾಶ ಬೇಕೆಂದ್ರೆ ಮಂಚವೇರಬೇಕು ಎಂದಿದ್ದ ನಟಿ ಈಗ ಅದನ್ನು ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾಳೆ.

ಶನಿವಾರ ಬೆಳಿಗ್ಗೆ ಹೈದ್ರಾಬಾದ್ ನಲ್ಲಿರುವ ಫಿಲ್ಮ್ ಛೇಂಬರ್ ಮುಂದೆ ನಟಿ ಅರೆಬೆತ್ತಲೆ ಪ್ರದರ್ಶನ ನೋಡಿ ಸಿಬ್ಬಂದಿ ದಂಗಾಗಿದ್ದಾರೆ. ತೆಲುಗು ಫಿಲ್ಮ್ ಛೇಂಬರ್ ನಲ್ಲಿ ನಾನೂ ಸದಸ್ಯತ್ವ ಹೊಂದಿದ್ದೇನೆ. ತೆಲುಗು ಮಂದಿ ನನ್ನನ್ನು ಇಷ್ಟಪಡ್ತಾರೆ. ತೆಲುಗು ಚಿತ್ರಗಳಲ್ಲಿ ತೆಲುಗು ಮಂದಿಗೆ ಶೇಕಡಾ 75ರಷ್ಟು ಅವಕಾಶ ನೀಡಬೇಕು. ಆದ್ರೆ ನನಗೇಕೆ ಅವಕಾಶ ಸಿಗ್ತಿಲ್ಲ ಎಂದು ಶ್ರೀರೆಡ್ಡಿ ಪ್ರಶ್ನೆ ಮಾಡಿದ್ದಾಳೆ.

ಘಟನೆ ನಂತ್ರ ಶ್ರೀರೆಡ್ಡಿಯನ್ನು ವಶಕ್ಕೆ ಪಡೆದ ಪೊಲೀಸರು ಸಭ್ಯ ರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಈವರೆಗೂ ಶ್ರೀರೆಡ್ಡಿ ಯಾವುದೇ ದೂರನ್ನು ಪೊಲೀಸರಿಗೆ ನೀಡಿಲ್ಲವೆಂದು ಹೇಳಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಶ್ರೀರೆಡ್ಡಿ ತೆಲುಗು ಚಿತ್ರರಂಗದ ಕರಾಳ ಮುಖವನ್ನು ಎಲ್ಲರಿಗೂ ಪರಿಚಯಿಸಿದ್ದಳು. ಫೇಸ್ಬುಕ್ ನಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಳು. ಕಾಸ್ಟಿಂಗ್ ಕೌಚ್ ಆರ್ಭಟ ಹೆಚ್ಚಾಗಿದೆ. ಕಾಂಪ್ರಮೈಸ್ ಮಾಡಿ ಮಂಚವೇರಿದ್ರೆ ಮಾತ್ರ ಅವಕಾಶ ಎಂದಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...